ಹಂಸಪ್ರಿಯರವರ ಕವಿತೆ -ಗುಪ್ತಗಾಮಿನಿ

ಕಾವ್ಯ ಸಂಗಾತಿ

ಹಂಸಪ್ರಿಯ

ಗುಪ್ತಗಾಮಿನಿ

ಗುಪ್ತಗಾಮಿನಿ.
ರುಧಿರದಲ್ಲಿ ಹರಿಯುತಿರುವೆ,
ಹೃದಯದಲಿ ಅವಿತಿರುವೆ.
ಸುಪ್ತವಾಗಿರು ನೀನು, ಗುಪ್ತಗಾಮಿನಿಯೇ…//ಪ //

ತೊರೆದುಹೋದರೆ ನೀನು,
ತೀರಿಹೋಗುವುದು ‘ಜಗ’ ..
ಹಣ್ಣೆಲೆ ಕಳಚಿ ಹಸಿರೆಲೆ ಚಿಗುಯುವಂತೆ
ಬದುಕ ಬಳ್ಳಿಗೆ ಜೀವರಸ ನೀನು,
ಸುಪ್ತವಾಗಿರು.. ಗುಪ್ತಗಾಮಿನಿಯೇ…//1//

ಹಸಿದು ಅಳುವ ಕಂದಮ್ಮಗಳ
ಎದೆಹಾಲ ಅಮೃತ ಕುಡಿಸಿ,
ಹಸಿವ ತಣಿಸಿ ನಸುನಗುವ ತಾಯಿಯಂತೆ ನೀನು
ಸುಪ್ತವಾಗಿರು… ಗುಪ್ತಗಾಮಿನಿಯೇ….//2//

ಹೊಸ ಚಿಗುರು, ಮೊಗ್ಗಾಗಿ
ಹೂ ವಾಗಿ,ಅರಳುವೆ ಪ್ರಾಯದಲಿ.
ಕನಸಾಗಿ ಮಧುರ ನೆನಪಾಗಿ ಕಾಡುವೆ…
ಕವಿಯಾಗಿ ಕಾವ್ಯವಾಗುವೆ ನೀನು
ಸುಪ್ತವಾಗಿರು… ಗುಪ್ತಗಾಮಿನಿಯೇ…//3//.

ಉಸಿರಲಿ ಉಸಿರಾಗಿ
ಹಸಿರಲಿ ಹಸಿರಾಗಿ
ಕತ್ತಲೆಯಲಿ ಬೆಳಗುವ ಬೆಳಕಿನ ಜ್ಯೋತಿ ನೀನು
ಸುಪ್ತವಾಗಿಯೇ ಇರು ಗುಪ್ತಗಾಮಿನಿಯೇ…//4//.


                     ಹಂಸಪ್ರಿಯ

Leave a Reply

Back To Top