ಕಾವ್ಯ ಸಂಗಾತಿ
ಈರಪ್ಪ ಬಿಜಲಿ ಕೊಪ್ಪಳ
ಹೈಕುಗಳು-ಒಂಟಿ ಚಪ್ಪಲಿ….
ಒಂಟಿಚಪ್ಪಲಿ
ಒದ್ದಾಡಿತು ಅತ್ತಿತ್ತ
ಸಂಗಾತಿಗಾಗಿ !!
ಗುಡಿಯ ಮುಂದೆ
ಬಿಟ್ಹೋದ ಮಾಲೀಕ
ಬರುವಷ್ಟ್ರಲ್ಲಿ..!
ಜನಜಂಗುಳಿ
ನೂಕಾಟದಿ ಬಿದ್ದಿತ್ತು
ಏಕಾಂಗಿಯಾಗಿ !!
ಉರುಳುರುಳಿ
ನರಳಿತ್ತು ಅತ್ತಿತ್ತು
ಕಣ್ಣೀರು ಹಾಕಿ !
ಮಾಲೀಕ ಬಂದು
ಸುತ್ತೆಲ್ಲಾ ಹುಡುಕಿದ
ಚಪ್ಪಲಿ ಜೋಡಿ !
ಸಿಗದಿದ್ದಾಗ
ಅಲ್ಲಿಯೇ ಬಿಟ್ಹೋದನು
ಒಂಟೀ ಚಪ್ಪಲಿ..!
ಚಪ್ಪಲಿ ಗೋಳು
ಕೇಳೋರು ಯಾರಿಲ್ಲದೆ
ಮನನೊಂದಿತು..!
ಮಾಲೀಕನಿಗೂ
ಬೇಡವಾದ್ನೇ ಚಪ್ಪಲಿ
ಆತ್ಮಹತ್ಯೆಯು..!!
ಈರಪ್ಪ ಬಿಜಲಿ ಕೊಪ್ಪಳ
ಒಂದಕ್ಕಿಂತ ಒಂದು ವಿಭಿನ್ನ ಹಾಯ್ಕು ಗಳು ಸರ್
ಶುಭಾಶಯಗಳು
ಹೃತ್ಪೂರ್ವಕವಾದ ಧನ್ಯವಾದಗಳು ಸರ್