ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ತಿಂಗಳ ಬೆಳಕೆಲ್ಲ ಬೇಸಿಗೆಯ ಬಿಸಿಲಾಯ್ತು
ತಿಂಗಳ ಬೆಳಕೆಲ್ಲ ಬೇಸಿಗೆಯ ಬಿಸಿಲಾಯ್ತು
ನಲ್ಲನಿಲ್ಲದ ಇರುಳು ನೀರಸವಾಗಿರಲು
ಕಂಗಳ ಕೊಳ ಕಂಬನಿಯಲಿ ತುಂಬೋಯ್ತು
ಕುಸಿಯಿತು ರಂಗಾದ ಆ ಕನಸಿನ ಮಹಲು
ಹೃದಯಗಳು ಬೆಸೆದು ಹೆಜ್ಜೆಗಳು ಜೊತೆಯಾಗಿ
ಭವಿಷ್ಯದ ಸೊಗದ ದಿನಗಳಿಗಿತ್ತು ಕಾತರವಂದು
ಲಜ್ಜೆಯಲಿ ಬಾಗಿದ ವದನವ ನನೇವರಿಸಲಾಗಿ
ಕಂಡರಿಯದ ರೋಮಾಂಚನ ಮೈಮನದಲಂದು
ಬರಿದಾದ ಬಾಳ್ವೆಯ ಪುಟಕಂದು ಮುನ್ನುಡಿಯಾದೆ
ಪ್ರತಿ ಹಾಳೆಯೂ ಹಂಬಲಿಸಿತ್ತು ನಿನ್ನಿರುವನ್ನ
ಕರೆವ ಮುನ್ನ ತೋಳ್ತೆಕ್ಕೆಯಲಿ ಸೇರಬಾರದೆ
ಉಸಿರುಸಿರಲ್ಲೂ ಹೊಸತು ತಲ್ಲಣ ಕೇಳೆನ್ನ
ತಿಳಿ ನೀರ ಕೊಳದಿ ಬಿದ್ದ ಕಲ್ಲಿಂದ ತರಂಗಗಳೆದ್ದಂತೆ
ಮನದಿ ಮಿಂಚೊoದು ಸುಳಿದಾಡುತಿರೆ
ಬೆಳ್ಮುಗಿಲ ಮೇಲೊಂದು ಕಾರ್ಮುಗಿಲು ಸರಿದoತೆ
ಮನವೀಗ ಚಿಗುರು ಚಿವುಟಿದ ಲತೆ ಒಣಗಿದಂತೆ.
ಮಾಲಾ ಚೆಲುವನಹಳ್ಳಿ
ಸೂಪರ್ ಆಗಿದೆ ಮಾಲಾ ಮೇಡಮ್ ಅಭಿನಂದನೆಗಳು…
ಎಂ. ಎಸ್. ನಾಗರಾಜ್ ಮೂಡಿಗೆರೆ
ಸೂಪರ್ ಆಗಿದೆ ಮೇಡಮ್