ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಸಹಕರಿಸು, ಕೂಸೆ
ಗೊತ್ತಿಲ್ಲ ಹಾಲುಣಿಸಿ.
ಎಲ್ಲ ಹೊಸದೆನಗೆ
ನಂ ಚೊಚ್ಚಲ ಹೆರಿಗೆ
**
ಹಸುಗೂಸಿನೊಂದಿಗೆ
ಅಮ್ಮನ ಮಾತುಗಳು
ಯಾವ ನಿಘಂಟಿನಲೂ
ಇರದ ಶಬ್ದಗಳು.
***
ಮಮತೆಯಲಿ ತಾಯಿ
ಹಾಲ್ಗಡಗ ತೊಡಿಸೆ,
ಮರೆತ್ತ್ಹೊಯ್ತು ಕೂಸಿಗೆ
ಹಾಲಿನ ಹಂಬಲವು.
***
ಯಾರಿಗೂ ತಿಳಿಯದ
ಕೂಸಿನ ಭಾಷೆ “ಅಳು”,
ಸರಿಯಾದ ಅರ್ಥವ
ತಾಯಿ ಮಾತ್ರ ಬಲ್ಲಳು.
***
ಹಸುಗೂಸಿನ ‘ಅಳು’
ಗಾ,,ಗೂ,,,ಊ,,,, ಮಾತುಗಳು.
ಮಮತೆ ಕಡಲಲಿ
ಮಾತೆ ಮುಳುಗುವಳು.
***
ಸುಮ್ನೆ,ಅತ್ತು, ನಗುವ
ಸ್ಥಿತಪ್ರಜ್ಞ ಹಸುಳೆ.
ಸಾವಿರ ಅರ್ಥೈಸುವ
ತಾಯಿ ಎಂಬ ಮರುಳೆ.
—————————-
ವ್ಯಾಸ ಜೋಶಿ