ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ಗೋರಿ ದಾರಿಗೆ

ಕಾವ್ಯ ಸಂಗಾತಿ

ಮರುಳಸಿದ್ದಪ್ಪ ದೊಡ್ಡಮನಿ

ಗೋರಿ ದಾರಿಗೆ

ನನ್ನ ಮೌನಕ್ಕೆ ಕೊಳ್ಳಿ ಇಟ್ಟು
ನಗೆ ಕಳೆದು ಬರಿ ನರಳಾಟ
ನೋವಿನಲೆ ದಿನ ಕಳೆದು
ಜೀವ ಬಾಣೆಲೆಯಲಿ
ಕುದಿಯುತಿದೆ

ನಿನ್ನಂತರಂಗದ ಮೌನ ಮುರಿದು ಮಾತಿನ
ಮುಲಾಮು ಹಚ್ಚಿ ಹೃದಯದ ಗಾಯಕೆ ಸವರಿ ಬಿಡುವಿ ಎಂದು ಕಾದು ಕುಳಿತಿದ್ದೇನೆ

ಸೋತವನ ಕಾಲುಗಳು ಮಣ್ಣು
ತುಳಿಯದಂತಾಗಿ ಮಸಣದ
ಹಾದಿ ಹಿಡಿದು ಹೊರಟಿವೆ
ನೆನಪಿನ ಹೊರೆಯ ಹೊತ್ತು

ಗೋರಿಯ ದಾರಿಗೆ ನೂರು
ಜನ ಬಂದರೂ ನಿನ್ನ ದಾರಿ
ಕಾಯುವ ನನ್ನ ಹಳಹಳಿ
ತಪ್ಪಲಿಲ್ಲ ಹುಚ್ಚು ನೋವಿಗೆ

ಮಣ್ಣಿಗೂ ನನ್ನ ಮೇಲೆ ವಿಪರಿತ ಒಲವು ಬಹುಬೇಗ
ನಿನ್ನ ಸಂಗವಳಿದು ಬಂದು ನನ್ನ
ಅಪ್ಪಿ ಬಿಡು ಎನ್ನುತಿದೆ.


ಮರುಳಸಿದ್ದಪ್ಪ ದೊಡ್ಡಮನಿ

ಸೋತವನ ಕಾಲುಗಳು ಮಣ್ಣು
ತುಳಿಯದಂತಾಗಿ ಮಸಣದ
ಹಾದಿ ಹಿಡಿದು ಹೊರಟಿವೆ
ನೆನಪಿನ ಹೊರೆಯ ಹೊತ್ತುಕಾವ್ಯ ಸಂಗಾತಿ

ಮರುಳಸಿದ್ದಪ್ಪ ದೊಡ್ಡಮನಿ

ಗೋರಿ ದಾರಿಗೆ

Leave a Reply

Back To Top