ಕಾವ್ಯ ಸಂಗಾತಿ
ಪರಿಮಳ ಐವರ್ನಾಡು ಸುಳ್ಯ ಕವಿತೆ-
ಎಲ್ಲಿರುವೆ
ಎಲ್ಲಿರುವೆಯೋ ನಾ ಕಾಣೆ
ಹೇಗಿರುವೆಯೋ ನಾ ಕಾಣೆ
ಬರುವೆನೆಂದು ಹೊರಟೆ
ಮತ್ತೆ ಬಾರದೆ ನೀ ಹೋದೆ
ಗಿಡ ಮರಗಳೆ ನೋಡಿದಿರಾ
ಅವನ ದನಿಯನು ಕೇಳಿಹಿರಾ
ಅರಳಿಹ ಸುಮಗಳೇ ಕಂಡಿರಾ
ಶಶಿವದನನ ಮಾತನು ಆಲಿಸಿದಿರಾ
ಕಾನನದ ನಡುವೆ ಹುಡುಕಿದೆನು
ಕಾಣಲೇ ಇಲ್ಲ ನನ್ನವನು
ಬೆಟ್ಟಗುಡ್ಡಗಳಲಿ ಅರಸಿದೆನು
ನೋಡಲಾಗಲಿಲ್ಲ ಅವನನ್ನು
ಹೇ ಮುದ್ದು ಪಾರಿವಾಳವೆ ಕೇಳೇ
ಕೊಡುವೆನು ನಿನ್ನಲೊಂದು ಓಲೆ
ತಲುಪಿಸು ಅವಗೆ ಪ್ರೀತಿಯ ಸಾಲು
ನನ್ನಲಿ ಕರುಣೆಯ ತೋರಲು ಹೇಳು
ಕಾದಿರುವೆ ಗೆಳೆಯನೆ ನಿನಗಾಗಿ
ನೀ ಹರಿಸುವ ಒಲವ ದಾರೆಗಾಗಿ
ಅಳಿಸಿಬಿಡು ಮನದ ನೋವನು
ಸೇರಿಬಿಡು ಹೃದಯ ಮಂದಿರವನು
ಪರಿಮಳ ಐವರ್ನಾಡು ಸುಳ್ಯ
ಪ್ರತಿಯೊಂದು ಸಾಲುಗಳು ಗೆಳೆಯನಿಗಾಗಿ ಪರಿತಪಿಸುತ್ತಿದೆ…