ಡಾ ಸಾವಿತ್ರಿ ಕಮಲಾಪೂರ ಕವಿತೆ-ಜೀಕೋಣ ಬನ್ನಿ ಜೋಕಾಲಿ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಜೀಕೋಣ ಬನ್ನಿ ಜೋಕಾಲಿ

ಜೀಕೋಣ ಬನ್ನಿ ಜೋಕಾಲಿ
ಅನಂತ ಬಯಲಿನ
ಬಾಳ ಬವಣೆಯ ಕಾಲಚಕ್ರದ
ಜೋಕಾಲಿ
ಮೇಲು ಕೀಲುಗಳ
ಅಡ್ಡಗೋಡೆಗೆ ಕಟ್ಟಿ ತೂಗುವ ಜೋಕಾಲಿ
ಬಡವ ಬಲ್ಲಿದ ಶಾಶ್ವತವಲ್ಲದ
ಜೋಕಾಲಿ
ಹುಟ್ಟು ಸಾವುಗಳ ಮೆಟ್ಟಿ
ತೂಗುವ ಜೋಕಾಲಿ
ಶರಣರೆದೆಗೆ ಹೂ ಹಾಸಿ ನಗು
ನಗುತ್ತ ಸಾಗುವ ಜೋಕಾಲಿ
ಜೀಕೋಣ ಬನ್ನಿ ಜೋಕಾಲಿ
ಸಂತ ಶರಣರು ಮೆಟ್ಟಿ ಜೀಕಿದ
ಜೋಕಾಲಿ


ಸೋಲು ಗೆಲುವಿನ ನಿತ್ಯ
ಪಯಣದಲಿ ಕಟ್ಟಿ ತೂಗಿದ ಜೋಕಾಲಿ
ಜೀಕೋಣ ಬನ್ನಿ ಜೋಕಾಲಿ ಹೃದಯಾಂತರಂಗದಲಿ
ಅಡಗಿದ ನೂರು ನೋವುಗಳ
ಮರೆಸಿ ತೂಗುವ ಜೋಕಾಲಿ
ಜೀಕೋಣ ಬನ್ನಿ ಜೋಕಾಲಿ
ಎದುರು ನಿಂತವರೆದೆಗೆ
ತೊಡೆ ತಟ್ಟಿ ನಿಲ್ಲುವ ಜೋಕಾಲಿ
ಜೀಕೋಣ ಬನ್ನಿ ಜೋಕಾಲಿ
ಹೂ ಮುಳ್ಳುಗಳ ಹಾದಿಯಲ್ಲಿ
ಗಂಧ ಕುಸುಮ ಮಲ್ಲಿಗೆ
ಕಂಪು ಬೀರಿ ಅರಳಿ ನಗುವ ಜೋಕಾಲಿ
ಜೀಕೋಣ ಬನ್ನಿ ಜೋಕಾಲಿ
ದ್ವೇಷ ಮರೆತು
ಮತ್ಸರ ದ ಗೋಡೆಯನು ಕೆಡವಿ
ನಿತ್ಯ ಜೀಕುವ ಜೋಕಾಲಿ
ಸುಂದರ ಬದುಕಿಗೆ
ಸವಿ ಮನದಿ ಹಾರೈಸುವ ಜೋಕಾಲಿ
ಜೀಕೋಣ ಬನ್ನಿ ಜೋಕಾಲಿ
ಅರುವಿನ ಗುರು ವರ್ಯರ ಜೋಕಾಲಿ
ಅನುಭಾವ ಅಡುಗೆಯನು
ನಿತ್ಯ ಬಡಿಸುವ ಜೋಕಾಲಿ
ಜೀಕೋಣ ಬನ್ನಿ ನಿತ್ಯ

ಬದುಕಿನ ಜೋಕಾಲಿ


ಡಾ ಸಾವಿತ್ರಿ ಕಮಲಾಪೂರ

Leave a Reply

Back To Top