ಕಾವ್ಯ ಸಂಗಾತಿ
ಇಮಾಮ್ ಮದ್ಗಾರ ಅವರ ಕವಿತೆ
ಬಂದುಬಿಡು
ಜಡವಾಗಿ ಗೂಡು
ಸೇರಿದ್ದ ಮನವ
ಮಲ್ಲಿಗೆ ಯಾಗಿಸಿ
ಒಲವಿನ ಮಂದಹಾಸ
ಮೂಡಿಸಿದವಳೇ..
ಕಾಮನೆಗಳ ಕದವ
ತಟ್ಟದಿದ್ದರೂ…
ಕಣ್ಣ ನೋಟದಲೇ..
ಒಲುಮೆಯ ಕಿರಣ
ಚಿಮ್ಮಿಸಿ ದವಳೇ..
ಕಂಪನ ವರಿಯದ
ಮನಸ್ಸೊಂದು ಸಲ
ಕಂಪಿಸಿತು ಯಾಕೆಂದು
ಅರ್ಥವಾಗುವ ಮೊದಲೇ..
ನಿನ್ನ ಹೆರಳ ಮಲ್ಲಿಗೆ ಘಮ
ಉತ್ತರ ಹೇಳಿತ್ತು
ಅದ್ಯಾವ ರೂಪವೋ ಕಾಣೆ
ಕವಿದ ಕತ್ತಲಲಿ
ಬೆಳ್ಳಿಯ ಬೆಳಕು !
ಒಲವಿನ ಒಳದನಿಯಲಿ
ಒಲುಮೆಯ ರಾಗ !
ಬಸವಳಿದ ಭಾವಕ್ಕೆ
ಹೊಸದಾಗಿ ಹೊಸ ಹುರುಪು
ನಿಂತಲ್ಲಿ ನಿಲಲಾಗುತ್ತಿಲ್ಲ
ಹೂತಿಟ್ಟ ಕನಸುಗಳು
ಮೊಳಕೆ ಯೊಡೆದಿವೆ
ನಿನ್ನ ಮಲ್ಲಿಗೆಯ
ಹೆರಳ ಘಮ ಆರುವ
ಮುನ್ನ ಬಂದುಬಿಡು
ಇಮಾಮ್ ಮದ್ಗಾರ