ಸುಲೋಚನಾ ಮಾಲಿಪಾಟೀಲ ಕವಿತೆ ನಮ್ಮ ಸಂವಿಧಾನ

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ನಮ್ಮ ಸಂವಿಧಾನ

ಬಹುಭಾಷಾ ಸಂಸ್ಕೃತಿಯ ಸಿರಿಯಲ್ಲಿ
ಅರಳಿನಿಂತ ನಮ್ಮ ಸಂವಿಧಾನ
ಆಳಾಗಿ ದುಡಿ ಅರಸನಾಗಿ ಉಂಬೆಂಬ
ಪರಿಕಲ್ಪನೆ ಬಿಂಬಿಸುವ ನಮ್ಮ ಸಂವಿಧಾನ

ಸರ್ವೇ ಜನಾ ಸುಖಿನೋ ಭವಂತು

ಏಕಧ್ಯೇಯನೊಳಗೊಂಡ ನಮ್ಮ ದೇಶದ
ಭಾರತಾಂಬೆಯ (ಮಾತೆಯ)ಪ್ರತಿರೂಪದ
ನಮ್ಮ ಸಂವಿಧಾನ
ಜನಸೇವೆಯೇ ಜನಾರ್ದನನ ಸೇವೆಯಂತೆ
ಆದರ್ಶ ಮೌಲ್ಯಗಳ ಬಿತ್ತಿದ ನಮ್ಮ ಸಂವಿಧಾನ

ಸರ್ವೇ ಜನಾ ಸುಖಿನೋ ಭವಂತು

ಸರ್ವರಿಗೂ ಸಮಪಾಲು ಸಮಬಾಳೆಂಬ
ಧ್ಯೇಯಹೊತ್ತ ನಮ್ಮ ಸಂವಿಧಾನ
ವಾಕ್ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯವು
ಪ್ರಜೆಗಳ ಹಿತರಕ್ಷಣೆಗಿಟ್ಟ ನಮ್ಮ ಸಂವಿಧಾನ

ಸರ್ವೇ ಜನಾ ಸುಖಿನೋ ಭವಂತು

ವಿಶ್ವದಲ್ಲಿಯೇ ವೈಶಿಷ್ಟ್ಯತೆಯ ಮೆರುಗು ಪಡೆದ
ಶಾಂತ ಸಾಂತ್ವನದ ನಮ್ಮ ಸಂವಿಧಾನ
ಎಲ್ಲ ಕ್ಷೇತ್ರಗಳಲ್ಲೂ ಸ್ಥಾನಮಾನ ಪಡೆದು
ವಿಶ್ವ ಭೂಪಟದಲ್ಲಿ ರಾರಾಜಿಸುವ ನಮ್ಮ ಸಂವಿಧಾನ


ಸುಲೋಚನಾ ಮಾಲಿಪಾಟೀಲ .

Leave a Reply

Back To Top