ಎ. ಹೇಮಗಂಗಾ ಅವರ ಹಾಯ್ಕುಗಳು

ಕಾವ್ಯ ಸಂಗಾತಿ

ಎ. ಹೇಮಗಂಗಾ ಅವರ

ಹಾಯ್ಕುಗಳು

ಎಲೆ ಮೇಲಿನ
     ತುಂತುರು ; ಸೃಷ್ಟಿ ಮಾಲೆ
     ಪೋಣಿಸಿದಂತೆ

     ಎದೆ ಹೊಲದಿ
     ಹಚ್ಚ ಹಸಿರು ನಿನ್ನ
     ಒಲವ ಪೈರು

     ಫಲಭರಿತ
     ಮರ ; ಬಿದ್ದ ಕಲ್ಲೇಟು
     ನೂರು, ಸಾವಿರ

     ಇರುಳ ನಭ
     ನಕ್ಷತ್ರಗಳ ಮಾಲೆ
     ಚಂದ್ರ ಪದಕ

     ಹೃದಯ ತುಂಬ
     ಮಾಯದ ಗಾಯಗಳು
     ನೀನೇ ಕಾರಣ

     ಹೊಂದಾಣಿಕೆಯ
     ಮಾತನ್ನು ಆಡದಿರು
     ಪ್ರೀತಿ ಸತ್ತಿದೆ

     ನಂಬಲಿ ಹೇಗೆ
     ವ್ಯಾಘ್ರಗಳು ಗೋಮುಖ
     ಹೊತ್ತು ನಿಂತಿವೆ

     ನೆನಪುಗಳ
     ಸಂದೂಕ ; ಜತನದಿ
     ಕಾಪಿಟ್ಟಿರುವೆ

      ನೀ ನೆನಪಾದೆ
      ಮುಂಗುರುಳು ಕೆನ್ನೆಗೆ
      ಮುತ್ತನ್ನಿಡಲು

      ಮುಂಜಾನೆಯ ಹೂ
      ಆಯುಸ್ಸು ಮುಗಿಯಿತು
      ಸಂಜೆ ಬಾಡಿತು


ಎ. ಹೇಮಗಂಗಾ ಅವರ

Leave a Reply

Back To Top