ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ಕೈದೀವಿಗೆ
ಹಗಲಿರುಳು
ದುಡಿದ ಸೂರ್ಯ
ವಿಶ್ರಾಂತಿಗೆಂದು ತೆರಳಿದಾಗ
ಇರುಳ ಕತ್ತಲೆಯನೋಡಿಸಲು
ಬೆಳಕು ನೀಡುವನು ಚಂದಿರ !
ಜಗದ ಪ್ರೇಮಿಗಳ
ಪಿಸುಮಾತಿಗೆ ಕಿವಿಯಾಗುವನು !
ಹಸಿದ ಹಸುಳೆಗೆ
ಊಟ ಮಾಡಿಸಲು
ತಾಯಿ ತೋರುವ
ಆಗಸದ ಅದ್ಭುತವಾಗುವನು !
ರೈತರ ಸುಗ್ಗಿ ಕಾಲಕ್ಕೆ ಹಿಗ್ಗಾಗುವನು !
ಮಹಿಳೆಯರ ಮದರಂಗಿಗೆ ಹಗಲಿರುಳು
ದುಡಿದ ಸೂರ್ಯ
ವಿಶ್ರಾಂತಿಗೆಂದು ತೆರಳಿದಾಗ
ಇರುಳ ಕತ್ತಲೆಯನೋಡಿಸಲು
ಬೆಳಕು ನೀಡುವನು ಚಂದಿರ !
ಜಗದ ಪ್ರೇಮಿಗಳ
ಪಿಸುಮಾತಿಗೆ ಕಿವಿಯಾಗು
ಕಿಲಕಿಲ ನಗುವಾಗುವನು !
ಗಂಡ ಹೆಂಡತಿಯರ
ಬಿಸಿಯುಸಿರಿಗೆ ಕಿಟಕಿ ಆಚೆಗೆ
ಸಾಕ್ಷಿಯಾಗುವನು !
ಮತ್ತೇರಿಸುವ ಮುತ್ತಿಗೆ ಹೊತ್ತಾಗುವನು !
ಹೆಣ್ಣಿನ ಹಣೆಗೆ ಸಿಂಧೂರವಾಗುವನು !
ಸಾಧನೆಯ ಹಾದಿಯಲಿ
ಹಗಲಿರುಳು ದುಡಿಯುವವರಿಗೆ
ಕೈ ದೀವಿಗೆಯಾಗುವನು !
ಸುಸ್ತಾದವರಿಗೆ ಬೆಚ್ಚನೆ ಹಾಸಿಗೆಯಾಗುವನು !
ಜಗವೆಲ್ಲ ಒಲುಮೆಯಿಂದ ಕರೆಯುವ ಚಂದಮಾಮನಾಗುವನು !
ಕವಿಗಳ ಕಾವ್ಯಕ್ಕೆ ವಸ್ತುವಾಗುವನು !!
ಪ್ರೊˌ ಸಿದ್ದು ಸಾವಳಸಂಗ
ಹಲ್ಲೊ ಮಿತ್ರರೇ ನಿಮ್ಮ ಕವಿತೆ ಕೈದೀವಿಗೆ ಅತ್ಯುತ್ತಮವಾಗಿದೆ .ಸೂರ್ಯ ಚಂದ್ರರ ದಿನಚರಿಯನ್ನು ಓದುಗರಿಗೆ ನೆನಪು ಮಾಡಿಕೊಟ್ಟಿದೆ. ಕಾವ್ಯಕೃಷಿ ಹೀಗೆ ಮುಂದವರೆದರೆ ಉತ್ತಮ.ಶುಭಾಶಯಗಳು.ಎಸ್ ವಿ ಮನಗುಂಡಿ ಧಾರವಾಡ