ಕಾವ್ಯ ಸಂಗಾತಿ
ವೈ.ಎ.ಯಾಕೊಳ್ಳಿ
ಕವಿತೆಯ ಸಂಕಟ
ಬಿಡುಗಡೆಯ ಮಾತು
ಆಡುವದು ಎಷ್ಟು ಮಾರಾಯ
ಜೀವ ಹಿಂಡುತ್ತದೆ
ಹೊರಬರದೇ ಸಾಲು
ಒಳಗೇ ಇದ್ದು ಕಾಡುತ್ತದೆ.
ಬೇಕು ಎಂದು ಹೇಳಿದಷ್ಟು ಅಲ್ಲ
ಸರಳ ,ಬೇಡ ಎಂದು ಹೇಳುವದು
ಒಮ್ಯಾದರೂ ಗಿಡದಿಂದ ಒಂದು
ಹೂವೂಹರಿಯದ ನಾವು
ಆಗುವ ನೋವು ಹೇಗೆ ಮರೆಯೋದು!
ಕೂಡಿ ಕಟ್ಟಿದ ಅಂದದ ಅರಮನೆ
ಯ ನಾವೇ ನಿಂತು ಕೆಡವಿದಂತೆ
ಒಂದೊಂದೆ ಇಟ್ಟಿಗೆ ಸಿಮೆಂಟಿನ ಕಾಯ
ಕಣ್ಣಮುಂದೆಯೆ ಬೀಳುತ್ತಿದ್ದರೂ
ಹೇಗೆ ಸಹಿಸೋದು?
ನಮ್ಮದೇ ದೇಹದ ಒಂದು ಅಂಗವನು
ನೋವು ಉಣ್ಣುತ್ತಲೇ ಕಿತ್ತು ಹಿಂಡಿದಂತೆ
ಆಗುತ್ತದೆ ಕಷ್ಟ, ,ಹೇಳಲಾರದ,ಹೇಳದೆಯೂ
ಇರದ ಭಾವ ಸಂಕಟ
ಆದರೂ ಆಡಿಯೇ ತೀರಬೇಕು
ಜೀವ ಹಿಂಡಿದರೂ
ಬಿಡುವ ಮಾತು,ಅನಿವಾರ್ಯ
ಅವರೂ ಉಳಿಯಲು ,ನಾವೂ ಉಳಿಯಲು
ಇದೊಂದೇ ದಾರಿ
ಇಲ್ಲ ರಹದಾರಿ
ವೈ.ಎ.ಯಾಕೊಳ್ಳಿ
ಕವಿತೆಯ ಸಂಕಟ ಕವನ ವಾಚನ ಮಾಡಿದೆ ಶುಭಕೋರಿಕೆಗಳು ಎಸ್ ವಿ ಮನಗುಂಡಿ
Helalaarada valanovina sankatada anavarana channagide sir pramod joshi dharwad