ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ-
ತುತ್ತು
ಹಲವು ಕನಸಿನ
ಭಾವ ಬುತ್ತಿಯ
ಮೊಸರು ಬೆಣ್ಣೆ
ತುತ್ತು ನೀನು
ಬಿಸಿಲು ತಣಿವಿಗೆ
ತಂಪು ನೀಡುವ
ರಾಗಿ ಅಂಬಲಿ
ಮಜ್ಜಿಗೆ
ತೊಯ್ವವ ಮಳೆಗೆ
ಹಿಡಿವ ಕೊಡೆಯು
ದೂರ ದಾರಿಯ
ಸಜ್ಜಿಗೆ
ಒಡಲ ಪ್ರೀತಿಯ
ಮುಗ್ಧ ಮನಸ್ಸು
ಗೂಡು ಕಟ್ಟಿದ
ಕಾವ್ಯ ನೀನು
ನನ್ನ ಬಾಳಿನ
ಮಿಣುಕು ಬೆಳಕು
ನನ್ನ ಬದುಕಿನ
ಜೀವವೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅತ್ಯುತ್ತಮ ಸುಂದರ ಕವನ
“ನನ್ನ ಬದುಕಿನ…….. “ಕೊನೆಯ ಸಾಲು…?
ಸುಂದರ ಭಾವದ ಕವಿತೆ ಧನ್ಯವಾದಗಳು ಸರ್
ಜೀವವು
ಹಲವು ಕನಸಿನ ಭಾವ ಬುತ್ತಿಯ ತುತ್ತು ನೀನು… ಎಷ್ಟು ಅದ್ಭುತವಾದ ಪರಿಕಲ್ಪನೆಯು ನಿಮ್ಮ ಕವನದ ಸಾಲುಗಳಾಗಿ ಹೊರಹೊಮ್ಮಿವೆ…… ಸರ್
ಅರ್ಥಪೂರ್ಣ ಪ್ರೀತಿಯ ಸೆಲೆ
ಅತ್ಯಂತ ಸುಂದರ ಭಾವದ ಹಾಡು
ಸರ್ ಸಂಗಾತಿ ಪತ್ರಿಕೆಯಲ್ಲಿ ನಿತ್ಯ ನಿಮ್ಮ ಕವನಕ್ಕೆ ಕಾಯುತ್ತಿರುವೆ
Very nice poem
ಏಷ್ಟು ಸುಂದರ ಭಾವ ಕಿರಣ
ನಿಮ್ಮ ಈ ಸುಂದರ ಕವನ
ಭರವಸೆಯ ಬೆಳಕು ಚೆಲ್ಲಿದ ಕವನ
ನವ್ಯ ಸಾಹಿತ್ಯದ ಖನಿ
Amazing poem
Most valuable poem
ಹಲವು ಕನಸಿನ
ಭಾವ ಬುತ್ತಿಯ
ಮೊಸರು ಬೆಣ್ಣೆ
ತುತ್ತು ನೀನು.. ತುಂಬಾ ಸುಂದರ ಕವನ ಸರ್..