ರಾಶೇ..ಯವರ ಕವಿತೆ-ಅನುಭವ..

ಕಾವ್ಯ ಸಂಗಾತಿ

ರಾಶೇ..ಯವರ ಕವಿತೆ

ಅನುಭವ..

ಎಂತದೋ ಗಲಿಬಿಲಿ
ಮನಸಿನಾಳದ ಕನವರಿಕೆ
ಹೂತಿಟ್ಟ ಕನಸುಗಳ
ಚಿಗುರೀಗ ಮೊಳೆತ ಅನುಭವ..

ನೆನ್ನೆ ನಾಳೆಗಳ ನಡುವಲಿ
ಸಮಯದದ್ದೇ ಚಡಪಡಿಕೆ
ಬೀಡುಬಿಟ್ಟ ಅನುಭವಗಳ
ಬೆಂಕಿಯ ಮೇಲೆ ನಿಂತ ಅನುಭವ..

ಕೊಟ್ಟ ಮಾತುಗಳ ಹೇಗೆ ಮರೆಯಲಿ
ಮರೆತುಹೋಯಿತು ಕೋರಿಕೆ
ಅದೆಂತದೋ ತಳಮಳ
ಮತ್ತದಂತೆದೋ ನಿಡುಸುಯ್ದ ಅನುಭವ..


ರಾಶೇ..

Leave a Reply

Back To Top