ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಮೌನ.
ಕರುಳಿನಾ ಕುಡಿ ಕೈಹಿಡಿದ
ಮಡದಿಯಾ ಬಿಟ್ಟು ನಡು
ರಾತ್ರಿಯಲಿ ಎದ್ದೋದ ಬುಧ್ಧನ ತಿರ್ಮಾನವ
ಮೌನದಿ ಸ್ವೀಕರಿಸಲಿಲ್ಲವೆ
ಯಶೋಧರೆ
ನವತಾರುಣ್ಯದ ಮಡದಿಯಾ ಬಿಟ್ಟು
ಅಣ್ಣ ಅತ್ತಿಗೆಯರೊಡನೆ
ಕಾಡಿಗೆ ತೆರಳಿದ ಪತಿಯ
ತೀರ್ಮಾನವ ಮೌನದಿ
ಸ್ವೀಕರಿಸಲಿಲ್ಲವೆ ಊರ್ಮಿಳೆ
ಬಲಗೈಯಂತಿರುವ ವಿಚಾರ ಪತ್ನಿಗೆ
ಏನೂ ಹೇಳದೆ ಕೂಡಲಕೆ ಹಾಗೆ ಹೋಗಲಿಲ್ಲವೆ
ಬಸವಣ್ಣ
ಮೌನದಿ ಸ್ವೀಕರಿಸಲಿಲ್ಲವೆ
ನೀಲಾಂಬಿಕೆ
ಮನದ ಯಾತನೆಯ ಬದಿಗೊತ್ತಿ
ಮಾಧುರ್ಯದ ಮುಗುಳ್ನಗೆಯ ಬಿತ್ತಿ
ಮೌನದಿ
ಬೆಳಗಿದರು ಒಲವೆಂಬಬತ್ತಿ
ಇದಕಿಂತ ಬೇರೆಬೇಕೆ ಸಹನಾಶಕ್ತಿ.
ಲಲಿತಾ ಪ್ರಭು ಅಂಗಡಿ