ವಿಮಲಾರುಣ ಪಡ್ಡoಬೈಲ್-ನನ್ನರಸಿ

ಕಾವ್ಯ ಸಂಗಾತಿ

ವಿಮಲಾರುಣ ಪಡ್ಡoಬೈಲ್

ನನ್ನರಸಿ

ct u

ಜಾಜಿ ಮಲ್ಲಿಗೆಯ ಕಂಪು
ಸುತ್ತಲು ಹರಡಿ
ನನ್ನೆದೆಯ ಭಾವಕೆ
ಹೊಸ ಹುರುಪು ನೀಡಿ
ಹೊರ ಹೊಮ್ಮಿತ್ತು ಬದುಕಿನ ಸುಗಂಧ

ಕತ್ತಲಲಿ ಅರಳಿದ ಹಾಲುಬಣ್ಣದ ಚೆಲುವು
ಸೆಳೆದೆ ನೀ ನನ್ನರಸಿಯ
ಅವಳ ಮುಡಿ ಏರಿ
ಸೊಬಗ ಇಮ್ಮಡಿಸಿ
ಹಸನ್ಮುಖದ ರತಿಯ ಆ ವದನ
ನನ್ನೆದೆಗೆ ನಾಟಿದ ಹೂ ಬಾಣ

ನಿಂತಲ್ಲಿ ನಿಲ್ಲಲಾರೆ
ಕೂತಲ್ಲಿ ಕೂರಲಾರೆ
ಹಲವು ಭಾವಗಳ ಕಂಪನ
ಎದೆ ಸೀಳಿ ನಿಮಿರುತ್ತಿದೆ
ತಣಿಸು ಬಾರೆ ನನ್ನೊಲವೆ
ಕಾದಿಹೆನು ನಿನ್ನ ಮಧುರ ಸ್ಪರ್ಶಕೆ

ಸುಂಗಧ ಸೂಸುವ ಹೂ ಮಂಚ
ಸಜ್ಜಾಗಿದೆ ನಮ್ಮೀರ್ವರಿಗೆ
ತಡವೇಕೆ ಬಾ ಪ್ರಿಯೆ…
ಹೊರಚೆಲ್ಲೆ ನೀ ಪ್ರೇಮದ ಕನಸ
ನಾ ಲೀನವಾಗುವೆ
ಪ್ರೀತಿ ಪರಿಮಳದ ಅಮಲಿನಲ್ಲಿ.

ಬಿಂಕದಲಿ ಸರಿಯದಿರು ನೀ ದೂರ
ನೀಡಲಾರೆ ನಾ ನೋವ
ಹೂವಿನಂಥ ಈ ತನುವ
ಕೋಮಲ ಕರದಲಿ
ಮೃದುವಾಗಿ ನೇವರಿಸಿ
ತುಟಿಯಂಚಿನ ಮಕರಂದವ ಹೀರಿ
ನಿನ್ನೊಳಗೊಂದಾಗುವೆ ಬಾ ನನ್ನ ಒಲವೇ….


ವಿಮಲಾರುಣ ಪಡ್ಡoಬೈಲ್

Leave a Reply

Back To Top