ಡಾ ಸಾವಿತ್ರಿ ಕಮಲಾಪೂರ-ಅಂತರ್ಗತ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಅಂತರ್ಗತ

ಅದೆಷ್ಟು ಜಡವಾಗಿತ್ತು ನನ್ನ ಮನ ಮಲ್ಲಸರ್ಜ
ಕಿತ್ತೂರಿನ ನಾಡಿನ ಮಣ್ಣಿಗಾಗಿ
ತೇಯುವ ನನ್ನ ಮನ ಗಂಧವಾಗಿತ್ತು.
ನೀನೇ ಅಲ್ಲವೇ ? ಅಕ್ಕಳಿದ್ದರೂ ಕಟ್ಟಿಕೊಂಡೆ ರಾಣಿಯಾಗಿ
ಪ್ರೀತಿ ಕಾಮನೆಯ ಸುಖ ಸುರಿಸದಿದ್ದರೂ ಸುರಿಸಿರುವೆ
ನಾಡಿಗಾಗಿ ರಕ್ತವನ್ನು
ಅದೇಷ್ಷು ಕಪಿಗಳು
ಹುನ್ನಾರ ನಡೆಸಿದರೂ
ನಿನ್ನೊಲವಿನ ಮಂದಹಾಸ ನಗೆ
ಸ್ಪೂರ್ತಿ ನನಗೆ ಮಹಾರಾಜ
ಈ ಸರಳುಗಳಲಿ ನನ್ನನ್ನು
ಬಂಧಿಸಿದರೇನಂತೆ ?
ಮನದಲ್ಲಿಯೇ ಮಾತನಾಡುತ್ತಿರುವೆ
ಇರುವರು ಗಟ್ಟೆದೆ ಗುಂಡಿಗೆಯ ಹೊತ್ತ ರಾಯಣ್ಣರು
ಕಂಬನಿಗರೆಯಬೇಡ
ನೋಡಲಾಗದು ಎನಗೆ ಮಲ್ಲಸರ್ಜ
ನಾಡ ಕಟ್ಟುವ ದೊರೆಯ ಮನ
ಕಂಪಿಸಬಾರದು ಅಲ್ಲವೇ ?
ನೆನವು ನನಗೆ ರಾಯ
ಅದಾವ ರೂಪ ಹೊತ್ತು ಬಂದ ನೋಡು ರಾಯಣ್ಣ
ನನ್ನನ್ನು ಕಾಣಲು
ಸಾರ್ಥಕ ವಾಯಿತು ಜೀವ
ಮಣ್ಣ ತೊರೆದು ಸೇರುವ ಜೀವ
ಮಣ್ಣಲ್ಲಿಯೇ ಅಂತ್ಯ ಅಲ್ಲವೇ ? ರಾಯ

ಹೋಗಿ ಬರುವೆ ನಾನು ಮತ್ತೆ ಹುಟ್ಟಿಬರಲಿ ಮಣ್ಣಲ್ಲಿ ನನ್ನಂತೆ ……


ಡಾ ಸಾವಿತ್ರಿ ಕಮಲಾಪೂರ

Leave a Reply

Back To Top