ಕಾವ್ಯ ಸಂಗಾತಿ
ನಾಗರಾಜ್ ಹರಪನಹಳ್ಳಿ
ದಾರಿ
ಕಣ್ಣ ದಾರಿ , ಬೈತಲೆಯ ದಾರಿ
ನಿನಗಾಗಿ
ಅಂಗೈ ಗೆರೆಗಳ ದಾರಿ
ಕಣ್ಣ ಮುಂದಿನ ದಾರಿ
ಕಣ್ಣ ಹಿಂದಿನ ದಾರಿ
ಮನದ ಸುತ್ತ ಸುತ್ತಿ ಬಂದ ದಾರಿ
ನಿನಗಾಗಿ
ನದಿಯ ದಾರಿ
ನಾವು ನಡೆದ ಒಲವಿನ ದಾರಿ
ಕುಳಿತು ನಿಂತು ;
ನಿಂತು ಕುಳಿತು ಚಲಿಸಿದ ದಾರಿ
ಮೌನದಲ್ಲಿ ಮಾತಾಡಿ
ಮಾತಾಡಿ ಮೌನವಾದ
ದಾರಿ
ಮಾತಾಡುತ್ತಲೇ ಇರುವ ದಾರಿ
ಮಾತಲ್ಲೇ ನಡೆಸಿದ ದಾರಿ
ಗೋಡೆ ಕಟ್ಟಿದ ದಾರಿ
ಗೋಡೆ ಕೆಡವಿದ ದಾರಿ
ಕೋಟೆಗೆ ಸಾಗುವ ದಾರಿ
ಕಡಲಿಗೆ ಆಹ್ವಾನಿಸುವ ದಾರಿ
ಸವಾಲುಗಳ ಎಸೆದ ದಾರಿ
ಎಲ್ಲವೂ ನಮಗಾಗಿ
ಹೂಗಳು ಪರಿಮಳ ಚೆಲ್ಲಿದ ದಾರಿ
ಚಂದ್ರನೂರಿಗೆ ಸ್ವಾಗತಿಸಿದ ಬೆಳದಿಂಗಳ ದಾರಿ
ಬೆವರು ಸುರಿಸಿದ ದಾರಿ
ಕಂಗಳು ಕಣ್ಣೀರಿಟ್ಟ ದಾರಿ
ಬೆಟ್ಟ ಗುಡ್ಡದ ಕಠಿಣ ದಾರಿ
ಅವ್ವ ಕಾದ ದಾರಿ
ಅಪ್ಪ ಕೈಹಿಡಿದು ನಡೆಸಿದ ದಾರಿ
ಎಷ್ಟೊಂದು ದಾರಿಗಳು
ಮುಗಿಯದ ಬದುಕಿಗೆ ?
ಎಲ್ಲವೂ ನಮಗಾಗಿ
————————————-
ನಾಗರಾಜ್ ಹರಪನಹಳ್ಳಿ
ಸೊಗಸಾದ ಪದ್ಯ
ಲವ್ಲಿ.