ಸುಶಾಂತ್ ಪೂಜಾರಿ ಕನ್ನಡಿಕಟ್ಟೆ-ಅರಂಭದ ಮುನ್ನುಡಿ

ಕಾವ್ಯ ಸಂಗಾತಿ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ

ಅರಂಭದ ಮುನ್ನುಡಿ

ಬತ್ತಿದ ಹೃದಯದೊಳಗೆ ಸುತ್ತಾಡಿ
ಹೋದವರು ಕೊಟ್ಟು ಹೋದ
ನೆನಪುಗಳಿವೆ…
ಬರಗೆಟ್ಟ ಕನಸುಗಳಲಿ ಕೂಡಾ
ಜೊತೆಯಾದ ಬಣ್ಣ-ಬಣ್ಣದ
ಚಿತ್ತಾರಗಳಿವೆ…

ಸೋತು-ಸೊರಗಿ ಹೋದ
ಕಣ್ಣುಗಳಲ್ಲಿ ಗೆಲುವಾಗುವ
ನಾಳೆಯ ಭರವಸೆಗಳಿವೆ…
ನಿನ್ನಲ್ಲಿರುವ ಅಹಂಕಾರದ ಕೊಂಕು
ಮಾತುಗಳು ಕಿವಿಗೇರಿರಲು
ತುಟಿಯ ಮೌನದ ಉತ್ತರಗಳಿವೆ…

ಬಿಟ್ಟುಬಿಡು ನೋವು ಚಿಂತೆಗಳ
ನೀ ಕಂಡ ನವ-ನವಿತವಾದ ಕನಸುಗಳ ನಡುವೆ…
ಸುಟ್ಟುಬಿಡು ನಿನ್ನಲ್ಲಿರುವ
ಕೋಪ ಕ್ರೋಧಗಳ ನಾಳೆಗಳ
ಹೊಸ ಚಿಂತನೆಗಳ ನಡುವೆ…

ಜೀವನ ನಡೆಸಬೇಕು ಬದುಕ ಸವೆದು
ಸಾಧನೆಗಳಿಗೆ ಆರಂಭದ
ಮುನ್ನುಡಿ ಬರೆಯುವಂತೆ…
ಹೆಸರು ಉಳಿಯಬೇಕು ನಡತೆಯೇ
ಮಾತಾಗಿ ವಿನಯತೆಯ ಅರಿವಾಗಬೇಕು
ನಾಣ್ಣುಡಿಯು ಪಸರುವಂತೆ…

—————————————–

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ

Leave a Reply

Back To Top