ಡಾ. ಬಸಮ್ಮ ಗಂಗನಳ್ಳಿ ಕವಿತೆ-ಕರುಣೆಯ ಮೂರ್ತಿ

ಕಾವ್ಯಸಂಗಾತಿ

ಡಾ. ಬಸಮ್ಮ ಗಂಗನಳ್ಳಿ ಕವಿತೆ

ಕರುಣೆಯ ಮೂರ್ತಿ

ಪೂಜೆಯು ಬೇಡದ
ದೇಗುಲ ಇಲ್ಲದ,
ಮನದ
ಮಂದಿರದೊಳಗೆ
ಕಂಗೊಳಿಸುವ
ಕರುಣಾ ಮೂರ್ತಿ
ಅಮ್ಮಾ …

ನಿನ್ನ ತ್ಯಾಗಕ್ಕೆ
ಸಮನಾರು?
ಪ್ರೀತಿಗೆ ಹೋಲಿಕೆ
ಇನ್ಯಾರು?
ಆಗದು
ಯಾರಿಂದಲೂ
ಜಗದೊಂದೇ ಪದ ನೀನು
ಅಮ್ಮಾ..

ನಿನ್ನ ಮಮತೆಯ
ಮಡಿಲ
ತೊಟ್ಟಿಲಾಸರೆಯಲಿ
ಬೆಳೆದ ನನಗೆ
ಬೇಡ
ಯಾರ ಆಸರೆ
ಅಮ್ಮಾ..

ನಿನ್ನ ನುಡಿ ನನಗೆ
ಪ್ರೇಮ ಗಾನ
ನಿನ್ನ ಬೆವರ ಹನಿ
ನನ್ನ ಸಾಧನೆ
ಎನ್ನ ಜೀವ
ಧನ್ಯವಾಯಿತು
ನಿನ್ನ ಬಸಿರ
ಕೂಸಾದುದಕೆ
ಅಮ್ಮಾ..

ನೆನಪಿನಂಗಳದಿ
ಬೆಳದಿಂಗಳ
ಚಂದ್ರನ
ತಂಗಾಳಿಯ
ತಂಪು
ಸೂಸು
ನೀನು
ಅಮ್ಮಾ..

ನನ್ನ ಬುದ್ಧಿ ,ಭಾವ
ದೇಹ, ಮನಸು
ರೂಪ ತಿದ್ದಿ ತೀಡಿ
ಸೋತು ಅತ್ತರೆ
ಬಿಗಿದಪ್ಪಿದಾ
ಮಹಾಸಾಂತ್ವನ
ಇನ್ನೆಲ್ಲಿ ?
ಅಮ್ಮಾ..

ನನ್ನ ಬಾಳ ಪುಟದಲಿ,
ನಿನ್ನ ಹೆಸರು
ಅಜರಾಮರ
ಉಸಿರಿರುವ ತನಕ
ಹಸಿರಾಗಿ
ನೆಮ್ಮದಿಯ
ನಿಟ್ಟುಸಿರು
ಸುಮಧುರ
ಸಂಗೀತ ಸುಧೆಯು

ಅಮ್ಮಾ..


ಡಾ. ಬಸಮ್ಮ ಗಂಗನಳ್ಳಿ

Leave a Reply

Back To Top