ವಿಶೇಷ ಲೇಖನ
ಡಾ ಅನ್ನಪೂರ್ಣ ಹಿರೇಮಠ

ಗಣೇಶ ಹಬ್ಬದ ಆಚರಣೆಯಲ್ಲಿ ಆಡಂಬರ ಅಗತ್ಯವೇ?

ಗಣೇಶ ಚತುರ್ಥಿ ಭಕ್ತಿಯ ಪರಾಕಾಷ್ಠೆ ಸಂಭ್ರಮದ ಹಬ್ಬ. ನಮ್ಮ ಹಿಂದೂಗಳ ಪ್ರಕಾರ ಪ್ರಥಮ ಪೂಜಿತ ವಿಘ್ನವಿನಾಶಕ ಪ್ರೀತಿಯ ಮನೆ ಮಗ, ತುಂಟ ಗಣಪನ ನೋಡುವುದೇ ಒಂದು ಸಂಭ್ರಮ, ಸಂತಸ . ವಿವಿಧ ವಿನ್ಯಾಸಗಳಿಂದ, ಆಕಾರಗಳಿಂದ, ಕಲಾಕಾರನ ಕಲಾಕುಸುರಿನಿಂದ ಅರಳಿದ ಗಣಪತಿಯ ಮೂರ್ತಿಗಳಂದ ಬನ್ನಿಸದಳ .ಆದರೆ ಅದು ಆಡಂಬರವಾಗಬಾರದು. .ಆಡಂಬರದ ಅಗತ್ಯವಿಲ್ಲ ಪರಿಸರಕ್ಕೆ ತೊಂದರೆಯಾಗದಂತಹ ಅಲಂಕಾರಗಳನ್ನು ಮಾಡಬೇಕು .ಕಿವಿಗಡಚಿಕ್ಕುವ ವಾದ್ಯಗೋಷ್ಠಿಗಳು ಅವಶ್ಯಕವಿಲ್ಲ ಪಟಾಕಿಯಂತೊ ಹೊಡೆಯಲೇಬಾರದು. ಜನಮಾನಸದಲ್ಲಿ ಪಟಾಕಿ ಹೊಡೆದರೆ ಗಣಪನ ತಂದಂತೆ ಆಗುವುದು ಎಂಬ ಭಾವ ತುಂಬಿ ಬಿಟ್ಟಿದೆ ಅದು ಹೋಗಬೇಕು.ಪಟಾಕಿ ಶಬ್ದ , ಶಬ್ದಮಾಲಿನ್ಯ ,ವಾಯುಮಾಲಿನ್ಯದಿಂದ ಜೀವನದ ಮೇಲೆ ತುಂಬಾ ಕೆಟ್ಟ ಪರಿಣಾಮವಾಗುತ್ತದೆ,ಮಕ್ಕಳಿಗೆ ಭಯ ಮತ್ತು ಅಪಾಯ.ಪ್ರಾಣಿ ಪಕ್ಷಿಗಳಿಗೂ ಕೂಡ ಹಾನಿಯಾಗುತ್ತದೆ. ಕಾರಣ ಗಣೇಶ ಚತುರ್ಥಿ ಸರಳವಾಗಿ ಆಚರಿಸಬೇಕು.
ಸರಳವಾದ ಸಡಗರದಿಂದ ಗಣೇಶ ಚತುರ್ಥಿ ಆಚರಿಸಬೇಕು .ಶಬ್ದ ಮಾಲಿನ್ಯ, ವಾಯು ಮಾಲಿನ್ಯ ,ಇತರೆ ನೈರ್ಮಲ್ಯಗಳು ಆಗದಂತೆ ಎಚ್ಚರವಹಿಸಿ ಎಲ್ಲರೂ ಕೂಡ ಸರಳವಾದ ಗಣೇಶ ಚತುರ್ಥಿ ಆಚರಣೆ ಮಾಡಬೇಕು ಎಲ್ಲರೂ ಕೂಡ ಪರಿಸರ ಸ್ನೇಹಿ ಗಣಪನನ್ನೇ ತರೋಣವೆಂದು ಪರಿಸರಸ್ನೇಹಿ ಗಣಪನ ಮಾಡೋಣ ಮಾರೋಣ ಶಪಥ ಗಯ್ಯೋಣ. ಪ್ಲಾಸ್ಟರ್ ಪ್ಯಾರಿಸ್ಸಿನಿಂದ ಮಾಡಿದ ಗಣಪತಿ ಮಾರಾಟ, .ತರುವುದು ,ನಿಲ್ಲಿಸೋಣ
ಅತಿ ದೊಡ್ಡ ದೊಡ್ಡ ಮೂರ್ತಿಗಳನ್ನು ಪ್ಲಾಸ್ಟರ್ ಪ್ಯಾರಿಸ್ ನಿಂದ ತಯಾರಿಸಿ, ದೊಡ್ಡ ಮಂಟಪಗಳ ಮಾಡಿ ದಿನವಿಡಿ ಧ್ವನಿವರ್ಧಕಗಳ ಬಳಸಿ, ಆಡಂಬರ ಮಾಡುವುದು ಸರಿಯಲ್ಲ. ತುಂಬಾ ಅಪಾಯಕಾರಿ ಕೂಡ, ಪರಿಸರಕ್ಕೆ ಹಾನಿಕರ ಆಗದಂತಹ ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಹೊಂಡ ಕೆರೆಗಳಲ್ಲಿ ವಿಸರ್ಜನೆ ಮಾಡಿ ಬರುತ್ತೇವೆ .ಆದರೆ ಅವು ಹಾಗೆಯೇ ಹಲವು ದಿನಗಳಾದ ಮೇಲೆ ಬೃಹದಾಕಾರದ ರತ್ಯಾಜ್ಯಗಳ ಗುಡ್ಡದಂತೆ ಕಾನವಂತಾಗುವುದು. ಪೂಜಿಸುವ ಗಣಪನ ವಿಕಾರ ಮೂರ್ತಿಗಳ ನೋಟ ಹೃದಯ ಹಿಂಡುವುದು. ಕರಗಲಾರದ ಮನ್ನಲ್ಲಿ ನೀರಿನೊಂದಿಗೆ ಲೀನವಾಗಿದ ಹಾಗೆ ಇರುವುದು ಅತಿದೊಡ್ಡ ಪರಿಸರ ಮಾಲಿನ್ಯಕ್ಕೆ ಕಾರಣ ವಾಗುವುದು. ಇದು ನಮ್ಮೆಲ್ಲರ ದುರದೃಷ್ಟಕರ ಸಂಗತಿ.
ಸಂಭ್ರಮ ಸಂತಸ ಸಾವಧಾನದಿಂದ ಹಿತವಾದ ರೀತಿಯಲ್ಲಿ ಮಿತವಾದ ವಸ್ತುಗಳ ಪರಿಸರದಲ್ಲಿ ಸಿಗುವ ವಸ್ತುಗಳ ಬಳಕೆಯಿಂದ ಮಾಡಬೇಕು ಇಲ್ಲಿ ಭಕ್ತಿಗಿಂತ ಆಡಂಬರ ಮುಖ್ಯವಾಗಬಾರದು. ಎಲ್ಲರೂ ಪರಿಸರದ ಕಾಳಜಿ ಅರಿತು ಬುದ್ಧಿವಂತರಾಗಿ ಹಿತಮಿತ ಆಡಂಬರವಿಲ್ಲದ ಆಚರಣೆಯೊಂದಿಗೆ ಭಕ್ತಿಭಾವ ಅರ್ಪಿಸಿ ಗಣಪನ ಪ್ರೀತಿಗೆ ಪಾತ್ರರಾಗಿ ಆಚರಿಸೋಣ. ಎಲ್ಲರೂ ಆಡಂಬರವಿಲ್ಲದ ಭಕ್ತಿಭಾವದ ಗಣೇಶ ಚತುರ್ಥಿ ಆಚರಿಸೋಣ
ಡಾ ಅನ್ನಪೂರ್ಣ ಹಿರೇಮಠ
ಇದೇ ತರಹದ ದರಿದ್ರ ಅನಿಸಿಕೆಗಳನ್ನು ನೀವು ಬೇರೆ (ಅ) ಧರ್ಮಗಳ ಬಗ್ಗೆ ಯಾಕೆ ಬರೆಯುವುದಿಲ್ಲ?.
ಏನೋ ಬರೆಯಲು ಬರುತ್ತದೆಂದ ಮಾತ್ರಕ್ಕೆ ನಮ್ಮ ಧರ್ಮಾಚರಣೆಗಳ ಬಗ್ಗೆ ಬರೆಯಲು ನಿಮಗೆ ಎಳ್ಳಷ್ಟೂ ನಾಚಿಕೆಯಾಗುವದಿಲ್ಲವೇ, ನಭದ ನಕ್ಷತ್ರ ಮೇಡಮ್?.