ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಇದು ಕಲ್ಯಾಣ ಕರ್ನಾಟಕ !!
ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ
ಬರೀ ಸೌಲಭ್ಯಗಳ ಅಸಮರ್ಪಕ
ಸಮಸ್ಯೆಗಳೇ ಇಲ್ಲಿ ವಾಸ್ತವಿಕ
ಇತಿಹಾಸ ಮಾತ್ರ ಸೌಂದರ್ಯ ವರ್ಧಕ
*ಶಿಕ್ಷಣಕ್ಕೆ ಇಲ್ಲಿ ಬೆಲೆಯೂ ಕಡಿಮೆ
ಬರೀ ಆರ್ಥಿಕತೆಯಿಲ್ಲದ ದುಡಿಮೆ
ಜನರಿಗೆ ಕಷ್ಟಗಳ ಪರಿವೆಯೇ ಕಡಿಮೆ
ಎಲ್ಲ ರಾಜಕಾರಣೀಗಳ ಮಹಿಮೆ
*ಜನರಿಗೆ ನೋವುಗಳೆ ಇಲ್ಲವೆಂಬ ಭಾವನೆ
ಕಷ್ಟಗಳೆ ಅವರಿಗೆ ಸಂಜೀವಿನಿ ಎಂಬ ಧೋರಣೆ
ಪ್ರಶ್ನಿಸುವ ಮನಸು ಇನ್ನೂ ಎಲ್ಲೂ ಕಾಣೆ
ಪ್ರಶ್ನಿಸಿದರೆ ಭ್ರಷ್ಟಾಚಾರಿಗಳ ಬೆದರಿಕೆಗಳ ಸಾಣೆ
*ಶಾಲೆಗಳಿಗಿಲ್ಲ ಸರಿಯಾದ ಸೂರು
ಬರೀ ಇಲ್ಲಗಳ ಕಾರುಬಾರು
ಸ್ವಾರ್ಥಿಗಳೇ ತುಂಬಿದ ಗಟಾರು
ಜನರ ಕಂಬನಿಗಿಲ್ಲ ಕರುಣೆಯ ತೇರು
*ನಾಯಕರಿಗೆ ಬರೀ ಪರ್ಸೆಂಟೇಜುಗಳ ಕೀರು
ಅಭಿವೃದ್ಧಿ ಕೆಲಸಗಳಿಗೆ ಮಾತ್ರ ಎಳ್ಳುನೀರು
ಸರ್ಕಾರದ ಕೋಟಿಹಣ ಸೇರುತ್ತಿದೆ ಪುಂಡರಿಗೆ
ಜನರಿಗೆ ಬಾರೀ ಭರವಸೆಗಳ ಹೂರಣವಿಲ್ಲದ ಹೊಳಿಗೆ
*ಇಲ್ಲಿನ ಜನರಿಗಿಲ್ಲ ಬವಣೆಗಳ ಏರುಪೇರು
ಬರೀ ಸಮಸ್ಯೆಗಳೇ ಇವರ ಮನೆದೇವರು
ಕಷ್ಟಗಳ ಸುಳಿಗೆ ಇತಿಹಾಸವೇ ಮೂಲ ಆಧಾರು
ಪರಿಹಾರ ಮಾತ್ರ ಮಾತಿನಲ್ಲೆ ಸಿಹಿಯ ಕೀರು
*ಓಡಾಡಲು ರಸ್ತೆಗಳಿಲ್ಲ ಬರೀ ಗುಂಡಿರಸ್ತೆಗಳೆಲ್ಲಾ
ವಾಸಕ್ಕೆ ಮನೆಗಳಿಲ್ಲ ಗುಡಿಸಲುಗಳೇ ಎಲ್ಲಾ
ಶುದ್ದ ಕುಡಿಯುವ ನೀರಿಲ್ಲ ಆದ್ರೇ ಜಲಾಶಯ ಪಕ್ಕದಲ್ಲೆಲ್ಲಾ
ಇಲ್ಲಗಳಿಗೆ ಜನರ ಬದುಕು ಹೊಂದಿಕೊಂಡಿದೆ ಎಲ್ಲಾ
*ಪೂರ್ವ ಇತಿಹಾಸ ಇವರಿಗೆ ಪಾಠವಾಗಿಲ್ಲ
ಪ್ರಶ್ನಿಸುವ ಮನೋಭಾವನೆ ಸತ್ತುಹೋಗಿದೆಯಲ್ಲ
ಬದುಕಿನ ಕಲ್ಯಾಣಕೆ ಜನರಿಗೆ ಆಸಕ್ತಿಯಿಲ್ಲ
ಸಮಸ್ಯೆಗಳನ್ನೆ ಸವಿಯುತ್ತಾರೆ ಬೆಲ್ಲ ಬೆಲ್ಲ
*ರಾಜಕಾರಣೀಗಳ ಬರೀ ಭರವಸೆಗಳ ಬಾಣ
ಪರಿಹರಿಸುತ್ತಿಲ್ಲ ಸಮಸ್ಯೆಗಳ ತಂಗುದಾಣ
ಜನರ ನಡೆನುಡಿಗಳಲ್ಲಿ ಕಲ್ಯಾಣವಾಗಿಲ್ಲ
ಅಜ್ಞಾನದ ತಮಸ್ಸೆ ಆವರಿಸಿದೆಯಲ್ಲ
*ಶಿಕ್ಷಣ ಪಡೆದು ಜ್ಞಾನ ಪಡೆಯಬೇಕೆಲ್ಲ
ದೃಷ್ಟ ಧುರಣೀರ ದೆವ್ವವ ಬಿಡಿಸಬೇಕೆಲ್ಲ
ಹಿಂದೂಳಿದ ಪ್ರದೇಶದ ಹಣೆಪಟ್ಟಿ ಕಳಚಬೇಕೆಲ್ಲ
ಜನರ ಮನುಸುಗಳು ಕಲ್ಯಾಣವಾಗಲಿ ಬೇಗ ಎಲ್ಲ…..
ಕಾಡಜ್ಜಿ ಮಂಜುನಾಥ