ಲಲಿತಾ ಕ್ಯಾಸನ್ನವರ ಕವಿತೆ ಕಣ್ಮಣಿ

ಕಾವ್ಯ ಸಂಗಾತಿ

ಲಲಿತಾ ಕ್ಯಾಸನ್ನವರ

ಕಣ್ಮಣಿ

ನನ್ನ ಜೀವದ ಜೀವದ್ಧು ನನ್ನ ಜೀವ
ಅದರ ನಗುವೆ ನನ್ನೊಲವ ಭಾವ

ಹಗಲುಗನಸಿನಲಿ ಆಕಾಶ ತೋರುವ
ಇರುಳುಗನಸಿನಲಿ ಹೊಸಜಗ ಸ್ರಷ್ಟಿಸುವ
ಬಿದಿರಕ್ಕಿಯಲು ಸ್ಥಿತ್ಯಂತರದ ನಗು ಚೆಲ್ಲುವ
ಬಿದಿಗೆ ಚಂದಿರದ ಮೊಗದ ಅನುಜೆಯಿವಳಾ

ಆಲದೆಲೆ ಬಟ್ಟಲಲಿ  ಬೆಟ್ಟದಾ
ಸಿಹಿಜೇನ ನುಣಿಸಿದವಳ
ಮಾಗಿದಬಾಳೆಯ ಪ್ರಸಾದವಾಗಿಸಿದವಳ
ಬಳಲಿದ್ದ ದೇಹಕೆ ತಣಿವನಿತ್ತವಳ..

ಕಣ್ಣಂಚು ಬೆಳಕು ಚೆಲ್ಲುವ
ಕಾಮನಬಿಲ್ಲು ಕಮಾನು ಕಟ್ಟಿದ ತೆರದಿ
ಮುಗುಳ್ನಗೆಯು ಸಪ್ತಸಾಗರಧ ನೀರು
ಗುಳಿಯಲ್ಲಿ ತುಂಬಿ ತುಳುಕುವ ತೆರದಿ..

ನನ್ನ ಸಂಪೂರ್ಣತೆಯ ಬಿಂಬ
ಮನದಾಳದ ಪಿಸು ಮಾತು
ಸಾತ್ವಿಕ ಜಗತ್ತಿನ ಅತ್ಯಂತ ಸುಂದರ
ಚಿತ್ರ ಅವಳು ನನ್ನಾಣೆ ನನ್ನನುಜೆ….

—————————-

ಲಲಿತಾ ಕ್ಯಾಸನ್ನವರ.

Leave a Reply

Back To Top