ಸುರೇಶ ತಂಗೋಡ ಕವಿತೆ-ಬಾಡಿಗೆಗಿದೆ‌

ಕಾವ್ಯ ಸಂಗಾತಿ

ಸುರೇಶ ತಂಗೋಡ

ಬಾಡಿಗೆಗಿದೆ‌

ಮನೆಯಲ್ಲ,ಸಂಬಂಧಗಳು
ಬಾಡಿಗೆಗಿದೆ ಈ ಜಗದಲಿ.

ಪ್ರೀತಿ-ಪ್ರೇಮಗಳ ಬಿಡಿ
ಮಾನವೀಯತೆಯಂತೂ ಬಾಡಿಗೆ ಸಿಗುವುದೇ ಇಲ್ಲ.

ಡ್ರೇಸ್ಸೂ,ಆಭರಣಗಳಷ್ಟೇ ಅಲ್ಲ
ಸತ್ತರೆ ಚಟ್ಟವೂ ಬಾಡಿಗೆಗಿದೆ ಇಲ್ಲಿ.

ಆಸ್ಪತ್ರೆಯ ಬೆಡ್ಡೂ,ನರ್ಶ್
ಅಷ್ಟೇ ಏಕೆ? ಡಾಕ್ಟರಗಳೂ ಬಾಡಿಗೆಯಿದ್ದಾರೆ.

ಬಾಡಿಗೆದಾರರೂ ನಾವೆಲ್ಲ
ಬಂದು ಹೋಗುವವರು ,ಮಾಲಿಕ ಮೇಲಿದ್ದಾನೆ.

———————
ಸುರೇಶ ತಂಗೋಡ.

Leave a Reply

Back To Top