ಕಾವ್ಯ ಸಂಗಾತಿ
ಇಮಾಮ್ ಮದ್ಗಾರ ಕವಿತೆ
ಮತ್ತೆ ಕಾಣಬೇಡ
ಭಾವನೆಗಳ ಹಾದಿಯಲಿ
ಮೌನದ ಭೇಟಿ
ನಿನ್ನ ಕಿರುನಗೆ ನೋಡುತ್ತಾ
ನಾನು ಎಡವಿಬಿಟ್ಟೆ
ಎಡವಿದ ನೋವಿಗೆ
ನೋವಿನೌಷಧಿ
ಕೊಡುವವರಾರು ?
ಕಣ್ಣ ಕನಸಿನ ಕಾವಲೂ..
ದಾಟಿ ನನ್ನೆದೆಯ
ಗದ್ದುಗೆಯಲಿ ಗೆಜ್ಜೆಕಟ್ಟಿ
ಕುಣಿದು ಬಿಟ್ಟೆ
ತಪ್ಪಿದಾ.. ಹೃದಯದ
ತಾಳ ಸರಿಪಡಿಸುವ
ರಾರು ?
ನನ್ನಾಸೆಗಳ
ಮೀನುಗಳೆಲ್ಲಾ
ನಿನ್ನ ಕಿರುನೋಟದ
ಗಾಳಕೆ ಸಿಕ್ಕಿಸಿ ಮಿಸುಕಲೂ
ಬಾರದಂತೆಹಿಡಿದಿರುವೆ
ಗಾಳಕಚ್ಚಿ ನಾಲಿಗೆಗಾದ ಗಾಯಕ್ಕೆ ಮುಲಾಮು ಹಚ್ಚವರಾರು?
ಕಣ್ಣಲ್ಲಿ ಕಣ್ಣಿಟ್ಟು
ನೋಡಿ ಕನಸು ಕಂಡ
ಮನಸಿಗೆ ಹುಚ್ಚೆದ್ದಿದೆ
ತಬ್ಬಿಕೊಂಡು
ಸಂತೈಸುವರಾರು ?
ಚಿಗುರೊಡೆವ ಸಂತಸಕ್ಕೆ
ಕಮರುವ ನೋವಿನ
ಸಂಕಟ ದರಿವಾಗುವ ದಿಲ್ಲ !
ಮತ್ತೇಂದೂ… ಕಾಣಬೇಡ
ಕಣ್ಣು ಕಣ್ಣು ಕೂಡಿ ಮತ್ತೇ..
ಆಸೆಯಬಳ್ಳಿ
ಚಿಗುರೊಡೆದೀ..ತು !!
ಆದಗಾಯವೇ..
ವಾಸಿಯಾಗಿಲ್ಲ
ಹುಣ್ಣಾಗಿ ಕೀವು ಸೋರುತಿದೆ
ಇಮಾಮ್ ಮದ್ಗಾರ