ಇಂದಿರಾ.ಕೆ-ಹನಿಗವನಗಳು

ಕಾವ್ಯಸಂಗಾತಿ

ಇಂದಿರಾ.ಕೆ

ಹನಿಗವನಗಳು

1) ಮನಸಿಗೆಲ್ಲಿದೆ ಸಾವಕಾಶ

 ಮನದಾಳದಲ್ಲಿ ಮುಚ್ಚಿಟ್ಟ
 ಭಾವನೆಗಳು ಬರವಣಿಗೆಯ
 ಸಾಲುಗಳಾಗಿ 
 ಗೀಚುತಿರುವಾಗ
 ಮಾತಿಗೆಲ್ಲಿದೆ ಅವಕಾಶ....?

 ಅಂತರಾಳದಲ್ಲಿ ಅವಿತ
 ನೋವುಗಳು ತಾ ಮುಂದು 
 ನಾ ಮುಂದು ಎಂದು
 ಕಾದಾಡುತಿರುವಾಗ
 ಮನಸಿಗೆಲ್ಲಿದೆ 
 ಸಾವಕಾಶ...?

2) ಕಣ್ಣ ಭಾಷೆ

 ನೂರಾರು ಪ್ರಶ್ನೆಗಳು
 ಕೇಳಲಾಗದೆ ಕಣ್ಣಂಚಿನಲ್ಲಿ
  ಕಾದುಕುಳಿತಂತಿವೆ 
  ಕಣ್ಣ ಭಾಷೆ...

  ಮರೆಯಾದ ಆಸೆಗಳು
  ಹೇಳಲಾಗದೆ
  ಮುಖಭಾವದಲಿ
  ಹಂಬಲಿಸುವಂತೆ 
   ಮೂಗ ಭಾಷೆ...

3) ಮೌನದ ಪಯಣ

  ಸ್ಪಂದನೆಗಳೇ ಇರದ
  ಮಾತುಗಳ ಜೊತೆ
  ಮೌನದ ಪಯಣ...

   ಬಣ್ಣ - ಬಣ್ಣದ 
   ಮುಖವಾಡ ತೊಟ್ಟ
   ಜನರ ಜೊತೆ
   ಬದುಕಿನ ಪಯಣ...

----------------------------


ಇಂದಿರಾ.ಕೆ

Leave a Reply

Back To Top