ಪ್ರಭಾ ಅಶೋಕ ಪಾಟೀಲ-ಬದುಕಿನ ನಂಟು

ಕಾವ್ಯ ಸಂಗಾತಿ

ಪ್ರಭಾ ಅಶೋಕ ಪಾಟೀಲ

ಬದುಕಿನ ನಂಟು

ಬದುಕು ಮೂರು ದಿನದ ಗಂಟೈತೆ
ಹುಟ್ಟು ಸಾವಿನ ನಡುವೆ ನಂಟೈತೆ
ವಿಚಾರ ಮಾಡಿ ನೋಡಿದರೆ ಏನೈತೆ
ಕಷ್ಟ ಸುಖದ ಜೋಡಿ ಹೊಂಟೈತೆ

ದೊಡ್ಡ ಕಾರ ಮನೆಯ ಬೈಸೈತೆ
ಪಡಿಯಾಕ ಅಡ ದಾರಿ ಹಿಡದೈತೆ
ಅಧಿಕಾರದ ಹಂಬಲ ಹೆಚ್ಚೈತೆ
ದುಡ್ಡಿನ ಹೊಳೆ ಯ ಹರದೈತೆ

ಆಸೆಗಳ ಬೆನ್ನಟ್ಟಿ ಹೊಂಟೈತೆ
ಕಂಡದ್ದೆಲ್ಲ ಬೇಕಂತ ಅಂತೈತೆ
ಹುಚ್ಚ ಕೊಡಿ ಹಂಗ ಮನಸ ಕುಣಿತೈತಿ
ಆದರೂ ಇದರಾಗು ಏನೋ ಮಜಾ ಅಯ್ತೆ

ಸ್ವಚ್ಛಂದದ ಹಾರಾಟ ಬಯಸೈತೆ
ಇದ್ದದ್ದ ಬಿಟ್ಟ ಇಲ್ಲದ್ದ ಕಾಡೈತೆ
ಬುದ್ಧಿಮಾತ ಮನ ಕೇಳದಾಗೈತೆ
ಆದರೂ ಏಕೋ ಮನಶಾಂತಿ ಕಾಣದಾಗೈತೆ

ಎಷ್ಟಿದ್ದರೇನ ಒಂದಿನಾ ಸತ್ತ ಹೋಗುದೈತೆ
ಇದ ತಿಳಿದ ನಡೆದರ ಜೀವನ ಬಾಳ ಚಂದೈತೆ
ಸಹಾಯ ಸಹಕಾರ ನೀಡುವುದ ನಿಜ ಧರ್ಮ ಐತೆ
ಅರಿತು ಬೆರೆತು ನಡೆದರ ಜೀವನ ಸೀ ಹೂರಣ ಆಗುತೈತೆ


ಪ್ರಭಾ ಅಶೋಕ ಪಾಟೀಲ.

Leave a Reply

Back To Top