ಕಾವ್ಯ ಸಂಗಾತಿ
ಪ್ರತಿಭಾ ಪಾಟೀಲ
ಅವಳ ಕೂಗು
ನೀನಿತ್ತ ಉಂಗುರ
ನನ್ನ ಕೈಲಿ ಮಾಯಾ
ಮರೆತು ಬಿಟ್ಟೆಯೇನು
ಹೇಳು ಬಾ ಗೆಳೆಯಾ
ನಾನಲ್ಲ ಶಾಕುಂತಲೆ
ನೀನಲ್ಲ ದುಶಂತ
ಆದರೆ ದುಶಾಸನರಿಹರಿಲ್ಲಿ
ಸೀರೆಯ ಎಳೆಯುವಂತ
ಭರವಸೆಯ ನೀಡಿ
ನನ್ನೊಂದಿಗೆ ಕೂಡಿ
ಹೊರಟು ಹೋಗುವದೆಂತ ನ್ಯಾಯ
ನರಕವಾಗಿದೆ ನೀನಿಲ್ಲದ ಈ ಸಮಯ
ಹೊಟ್ಟೆಯೊಳಗೊಂದು
ಮೊಟ್ಟೆಯು ಮೂಡಿದೆ
ಬಚ್ಚಿಟ್ಟುಕೊಳ್ಳಲು
ಕಷ್ಟವಾಗುತ್ತಿದೆ
ಹೋರಾಡುತ ಕಾದಾಡುತಿರುವೆ
ಸಮಾಜದ ಕಟ್ಟುಪಾಡುಗಳೊಂದಿಗೆ
ನರಳಾಡುತ ಹೊರಳಾಡುತಿರುವೆ
ಮೊಟ್ಟೆಯ ತಂದೆಯ ಹೆಸರಿಗೆ
ಬದುಕಬೇಕಿದೆ ಗೆಳೆಯಾ
ನನಗಾಗಿ ಅಲ್ಲದಿದ್ದರೂ ಮಗುವಿಗಾಗಿ
ಲೋಕದಲ್ಲಿ ಕಣ್ಣು ತೆರೆದು
ನೋಡಬೇಕಾದ ಕರುಳ ಬಳ್ಳಿಗಾಗಿ
ಹೆಸರನಿಟ್ಟು ಹೆಸರು ಕೊಟ್ಟು
ಹೆಸರಾಗು ಬಾ
ಶಾಕುಂತಲೆಗೆ ಕೊನೆಗೂ ಸಿಕ್ಕ
ದುಶಂತನಾಗು ಬಾ
ಪ್ರತಿಭಾ ಪಾಟೀಲ
ಕವನ ಬಹಳ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ ಮೇಡಂ ಜಿ