ಮನ್ಸೂರ್ ಮುಲ್ಕಿ-ನೆರಳಿನ ಬದುಕು

ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

ನೆರಳಿನ ಬದುಕು

ಮೌನರಾಗಿರಣ್ಣ ಒಮ್ಮೆ ಮೌನರಾಗಿರಣ್ಣ
ದೇಹದೊಳಗಿನ ಕಲ್ಮಶ ಚೆಲ್ಲಿ
ಸಾಗರದಾಳದ ಪ್ರೀತಿಯ ತೋರಲು
ಮೌನರಾಗಿರಣ್ಣ ಒಮ್ಮೆ ಮೌನರಾಗಿರಣ್ಣ

ಆಸೆದಾಹವನು ಒಮ್ಮೆಲೆ ಸುಟ್ಟು
ಕೊಡುವ ದಾನವನು ಅರಿಯದೆ ಕೊಟ್ಟು
ಮನದ ಕೋಣೆಯಲಿ ಗಿಡವನು ನೆಟ್ಟು
ನೆರಳ ನೀಡಿರಣ್ಣ ನೀವು ನೆರಳ ನೀಡಿರಣ್ಣ

ಅನ್ನಕು ಒಂದು ಬಣ್ಣವನಿಟ್ಟು
ಬಣ್ಣವೇ ಇಲ್ಲದ ನೀರನು ಕೊಟ್ಟು
ಹಸಿವದಾಹವನು ನೀಗಿಸಿದವನ ನೋಡಣ್ಣ
ಆತ್ಮದೊಳಗೆ ನೀ ಮಾನವನಾಗಣ್ಣ

ಸಹಬಾಳ್ವೆಜೊತೆಯಲಿ ಸಹನೆ ಇರಲಿ ಅಣ್ಣ
ದೇವನಿರುವನಲ್ಲಿ ಒಮ್ಮೆ ಕಾಣಿರಣ್ಣ
ಕನ್ನಡ ತಾಯಿನೆಲದ ಸವಿಯನ್ನು ಉಣ್ಣಣ್ಣ
ಇದಕ್ಕಿಂತ ದೊಡ್ಡಭಾಗ್ಯ ಬೇರೇನು ಬೇಕಣ್ಣ


ಮನ್ಸೂರ್ ಮುಲ್ಕಿ

Leave a Reply

Back To Top