ಪ್ರೊ. ಸಿದ್ದು ಸಾವಳಸಂಗ ಕವಿತೆ ರಾಕ್ಷಸ ಪ್ರವೃತ್ತಿ

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ರಾಕ್ಷಸ ಪ್ರವೃತ್ತಿ

ನನಗೆ ಈಗೀಗ ಚೂಪಾದ
ಕೋರೆ ಹಲ್ಲುಗಳು ಬೆಳೆದಿವೆ !
ನನ್ನ ಉಗುರುಗಳು ಕೈಯಲ್ಲಿ
ಮಾರುದ್ದ ಹರಡಿವೆ !
ಕೇಶ ರಾಶಿಗಳು ನೆಲವನ್ನು ತಾಕುತ್ತಿವೆ !
ಕೈಯಲ್ಲಿ ಕೊಲ್ಲುವ ಆಯುಧ ಬಂದಿದೆ !
ಮನುಜ ಸಂತತಿಯನ್ನು ಕಂಡರೆ
ನನಗೆ ಆಗಿ ಬರುವುದಿಲ್ಲ !
ನಾನು ವಿಕಟವಾಗಿ ಗಹಗಹಿಸಿ ನಗಬೇಕೆನಿಸಿದೆ !
ಜೋರಾದ ಗಾಳಿಯೂದಿ ಮಾನವರನ್ನು
ಧೂಳಿಪಟ ಮಾಡಬೇಕೆನಿಸಿದೆ !
ಎದುರಿಗೆ ಬಂದರೆ ಮನುಜರನ್ನು ತಿಂದು ತೇಗಬೇಕೆನಿಸಿದೆ !
ಋಷಿ ಮುನಿಗಳು ಕೈಗೊಳ್ಳುವ
ಯಜ್ಞ ಯಾಗಗಳನ್ನು ಹಾಳು ಮಾಡಬೇಕೆನಿಸಿದೆ !
ಸುಂದರ ಮಹಿಳೆಯರನ್ನು ಕಂಡರೆ
ಅಪಹರಿಸಬೇಕೆಂಬ ಕುಹಕ ಯೋಚನೆ ಬರುತ್ತದೆ !
ಆದರೆ ನನಗೊಂದೇ ಚಿಂತೆ
ನನ್ನ ಮುಂದೆ ರಾಮ ಲಕ್ಷ್ಮಣರು ಬಂದರೆ
ಅವರನ್ನು ಎದುರಿಸುವುದು ಹೇಗೆ ?


ಪ್ರೊ. ಸಿದ್ದು ಸಾವಳಸಂಗ

Leave a Reply

Back To Top