ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ನಾನೆಂದೂ ನನ್ನೊಳಗಿನ ನನ್ನನು ಹುಡುಕಲೇ ಇಲ್ಲ
ಬದುಕ ಬಯಲೊಳಗಿನ ಪದರುಗಳನು ಬಿಡಿಸಲೇ ಇಲ್ಲ
ಬಣ್ಣದಲಿ ನೇಯ್ದ ಮೆರುಗಿನ ಜಗವಿದು ಅಲ್ಲವೇ
ಎದೆಯೊಳು ಅವಿತಿಟ್ಟ ಭಾವಗಳನು ಕರೆಯಲೇ ಇಲ್ಲ
ಕಂಗಳಲಿ ಮೂಡಿದ ಕನಸು ಮಿನುಗಿದೆ ತಾರೆಯಂತೆ
ಒಡಲಲಿ ಕುದಿವ ಅಳಲುಗಳನು ನೆನೆಯಲೇ ಇಲ್ಲ
ಮಳೆಬಿಲ್ಲು ಹಿಡಿಯುವಾಸೆ ಮುಟ್ಟಿಗೆಯಲಿ ಗಗನ ಏರಿ
ಮುಸುಕು ಸರಿಸಿ ಸರಳುಗಳನು ಮುರಿಯಲೇ ಇಲ್ಲ
ಸದ್ದಿಲ್ಲದೆ ಉದುರುವವು ಬೇಗಂ ಳ ಕಣ್ಣೀರ ಹನಿಗಳು
ನಾನು ಯಾರೆಂಬುದು ನನಗಿನ್ನೂ ತಿಳಿಯಲೇ ಇಲ್ಲ
———————————-
ಹಮೀದಾ ಬೇಗಂ ದೇಸಾಯಿ
ಚಿಂತನಾರ್ಹ ಗಝಲ್. ಸೊಗಸಾಗಿ ಮೂಡಿಬಂದಿದೆ.
ಧನ್ಯವಾದಗಳು ಮೆಚ್ಚುಗೆಗೆ ತಮಗೆ
ಹಮೀದಾ ಬೇಗಂ ಸಂಕೇಶ್ವರ.