ಕಾವ್ಯ ಸಂಗಾತಿ
ರಾಜೇಶ್ವರಿ ಎಸ್.ಹೆಗಡೆ
ಪಾರಿಜಾತ…
ಇಳೆಯು ನೆತ್ತಿಗೇರಲು ಪಾರಿಜಾತದ ಘಮ ಘಮ
ತಣ್ಣನೆಯ ಸ್ಪರ್ಶಕೆ ಕಿರುನಗೆ ಬೀರುವ ಈ ಸುಮ
ಬಡಕಲು ಸುರಸುಂದರಿ ಹಾದು ಹೋಗಲು ನಕ್ಕಿತು
ಒಣ ಜಂಬದಿ ಕಿರುನಗೆಯ ಬೀರುತ ನಲಿದಾಡಿತು.
ರವಿಕಿರಣ ಭುವಿಗೆ ಮುತ್ತಿಕ್ಕಲು ರಾತ್ರಿರಾಣಿ ಆಗಮನ
ಸೂರ್ಯ ನೆತ್ತಿಗೇರಿದಂತೆ ಮುರುಟಿ ಬಾಡಿ ನಿರ್ಗಮನ
ಶಿವನ ಮುಡಿಯಲಿ ಮೆರೆಯುವ ಹರನ ಸಿಂಗಾರಿಯು
ದಕ್ಷಿಣಏಷ್ಯಾ ತವರಿoದಬಂದ ಹವಳಮಲ್ಲೆ ರಾಣಿಯು
ಅಚ್ಚ ಬಿಳಿಯ ಹಾಲುಗಲ್ಲದ ಹಳದಿತೊಟ್ಟು ಹೊಂದಿಹೆ
ಸುವಾಸನೆ ಭರಿತವಾಗಿ ರಾತ್ರಿ ಅರಳಿ ರಾತ್ರಿರಾಣಿ ಆಗಿಹೆ
ಸುಕೋಮಲ ಪರಿಮಳದಿ ಸುತ್ತೇಲ್ಲವೂ ಪಸರಿಸುವೆ
ಪುಟ್ಟ ಗಾಳಿ ಬಂದರೂ ಗಿಡದಿಂದ ಉದುರಿ ಹೋಗುವೆ.
ರಾತ್ರಿ ಅರಳಿ ಮುಂಜಾವಲಿ ಬಿದ್ದು ಬೇಗ ಬಾಡಿ ಹೋಗುವೆ
ಬಿದ್ದ ಹೂವಿನಲ್ಲೂ ಔಷದಿ ಗುಣವ ಹೊಂದಿರುವೆ
ಹೂವಿನ ಸುಗಂಧ ದ್ರವ್ಯದಿ ಗಂಧದ ಕಡ್ಡಿ ಮಾಡುವರು
ಜ್ವರ ಕೆಮ್ಮು ನೆಗಡಿಗೆ ಎಲೆಗಳನು ಉಪಯೋಗಿಸುವರು.
ರಾಜೇಶ್ವರಿ ಎಸ್.ಹೆಗಡೆ