ಮಾಲತೇಶ ನಾ ಚಳಗೇರಿ ಕವಿತೆ -ಎಲ್ಲೋ ಹುಡುಕಿದೆ ಇಲ್ಲದ ಸುಖವನು

ಕಾವ್ಯ ಸಂಗಾತಿ

ಮಾಲತೇಶ ನಾ ಚಳಗೇರಿ ಕವಿತೆ

ಎಲ್ಲೋ ಹುಡುಕಿದೆ ಇಲ್ಲದ ಸುಖವನು

ಎಲ್ಲೋ ಹುಡುಕಿದೆ ಇಲ್ಲದ ಸುಖವನು
ದೇಹ ದೇಹಗಳ ಸಮ್ಮಿಲದಿ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಅಪ್ಪುಗೆ ಮರೆತೆನು ಬೇಸರದಿ॥ ಪ॥

ದೇಹಕು ಮನಸಿಗು ಒಮ್ಮತವಿದ್ದರೆ
ಕಾಯುವ ದೇವರ ನೆಲೆಯು ಇದೆ
ಹಾಸ್ಯದ ಲಾಸ್ಯದಿ ನಗುನಗುತಿದ್ದರೆ
ಬೇಸರಕೆಲ್ಲಿ ಜಾಗೆ ಇದೆ॥ *೧*

ಎಲ್ಲಿದೆ ಸುಖವು ಎಲ್ಲಿದೆ ದುಃಖವು
ಎಲ್ಲಾ ಇದೆ ಈ ನಮ್ಮೊಳಗೆ
ಮನಸಿನ ಕೊಳೆಯನು ತೊಲಗಿಸಿದರೆ ತಾ
ಅಮೃತದ ಸೆಲೆಯಿದೆ ಮನಸೊಳಗೆ॥ *೨*

ಆಸೆಯ ಗೋಪುರ ಚಿಕ್ಕದು ಇದ್ದರೆ
ಆತ್ಮಕೆ ತೃಪ್ತಿಯ ಸುಖವು ಇದೆ
ಇದ್ದುದರೊಳಗೆ ಸುಖವನು ಪಟ್ಟರೆ
ನಗುವಿನ ಹೂಬನ ಅಲ್ಲಿ ಇದೆ॥ *೩*

ಇರುವ ಹಾಗೇಯೆ ಇದ್ದರೆ ನಾವ್ಗಳು
ಸ್ವರ್ಗದ ಬಾಗಿಲು ನಮ್ಮೆದುರು
ಹಂಚಲು ಪ್ರೀತಿಯ ಶುದ್ಧನೆ ಮನಸಲಿ
ದೇವರ ಲೋಕಕೆ ನಾವೆದುರು॥ *೪*


ಮಾಲತೇಶ ನಾ ಚಳಗೇರಿ

One thought on “ಮಾಲತೇಶ ನಾ ಚಳಗೇರಿ ಕವಿತೆ -ಎಲ್ಲೋ ಹುಡುಕಿದೆ ಇಲ್ಲದ ಸುಖವನು

  1. Brother, when we go beyond our limits there will be no happiness.We have to feel comfortable,contended and satisfied with what we have.

Leave a Reply

Back To Top