ಈಶ್ವರ ಜಿ ಸಂಪಗಾವಿ ಗಜಲ್

ಕಾವ್ಯ ಸಂಗಾತಿ

ಈಶ್ವರ ಜಿ ಸಂಪಗಾವಿ

ಗಜಲ್

ಬಿರಿದ ಮೊಗ್ಗಿಗೆ ಪನ್ನೀರ ಲೇಪಿಸಿ ಭಾವನೆಗಳ ಕರೆದುಬಿಡು
ತೆರೆದ ಹೃದಯಕೆ ಮಧುವ ಅಂಟಿಸಿ ನೋವುಗಳ ತೊರೆದುಬಿಡು

ಬೆರೆತ ಚಣಗಳ ನೆನಪು ಮರುಕಳಿಸಿ ಪ್ರೇಮಲೋಕವ ಸೃಷ್ಟಿಸು ಬೇಗ
ಮರೆತ ದಿನಗಳ ಹುರುಪು ಹೊಮ್ಮಿಸಿ ಕಲ್ಪನೆಗಳ ತೆರೆದುಬಿಡು

ಸುರಿವ ಸಂತಸದ ಸೋನೆ ಮಳೆಗೆ ದುಗುಡ ಕರಗಿ ಹೋಗಲಿ ಈಗ
ಮೊರೆತ ಕ್ಷೀಣಿಸದಂತೆ ಭೋರ್ಗರೆವ ನೀರ ತೊರೆಗಳ ಸುರಿದುಬಿಡು

ಬದುಕಿನ ಸಾಧನೆಗಳ ಸಾಧಿಸುವ ಛಲದ ಮಜಲುಗಳ ಕಟ್ಟುತಲಿರು
ಹುದುಗಿದ ಒಳಮನದ ಕದಡುವ ಅಗಮ್ಯ ಸುಳಿಗಳ ಹರಿದುಬಿಡು

ಒಂಟಿತನಕೆ ಮುದುಡಿದ ಸುಖದ ಸುಪ್ಪತ್ತಿಗೆಯ ಒಪ್ಪಗೊಳಿಸು
ಕುಂಟುನೆಪಕೆ ಬೆಲೆಯಿಲ್ಲ ಈಶ ಒಲವ ಪೂಜೆಗೆ ಕಾವ್ಯ ಬರೆದುಬಿಡು


ಈಶ್ವರ ಜಿ ಸಂಪಗಾವಿ.

Leave a Reply

Back To Top