ಕಾವ್ಯ ಸಂಗಾತಿ
ಲಲಿತಾ ಕ್ಯಾಸನ್ನವರ
ಸಖಿ
ನೀರಿಲ್ಲದ ಕೆರೆಯಲ್ಲಿ ಸೆಲೆಯು ಉಕ್ಕಿದಂತೆ ಬದುಕುವ
ಹೂವಿಂದ ಗಂಧ ಪಸರಿಸಿ ಗಾಳಿಯಾವರಿಸಿದಂತಿರುವಾ
ಬದುಕ ಪ್ರಶ್ನೆಗೆ ಉತ್ತರಗಳವೆ
ನಾನಿದ್ದಿನಿ ದಡ್ಡ ಚಿಂತೆಯೆಕೆ ಎನುವಂತೆ,
ಅಳು ನಗುವಿನ ಸಮ್ಮಿಲನದಂತೆ
ಅಮ್ಮ ಮಗುವಿನ ಪ್ರೀತಿಯಂತೆ
ಮಿನುಗುವ ನಕ್ಷತ್ರತಾರೆಯಂತೆ…
ಭುವಿಬೆಳಗುವ ಶಶಿರವಿಯಂತೆ..
ಬೆಂದ ಅನ್ನದ ಘಮದಂತೆ
ಹಸಿವು ನೀಗಿಸುವ ಊಟದಂತೆ
ಹಾಲು ಸಕ್ಕರೆಯ ಮಿಲನದಂತೆ
ನಿರಾತಂಕವಾಗಿ ಹರಿಯುವ ನೀರ ಝರೆಯಂತೆ
ನಿರಂತರವಾಗಿರುವ ಹಗಲು ರಾತ್ರಿಯಂತೆ
ಶಾಶ್ವತವಾಗಿರಬೇಕು ಸಖಿ
ರಕ್ತ ಸಂಬಂಧಕ್ಕಿಂತ ಸ್ನೇಹ ಸಂಬಂಧ ಬಲುಗಟ್ಟಿ…
ಉಸಿರಿಗೆ ಉಸಿರು
ಬರಡತೆಗೆ ಹಸಿರು
ಒಲವಿಗೆ ಚೆಲುವಿಗೆ ನೀನೇ
ನಿನದೇ ಹೆಸರು ಸಖಿ..
ಜೊತೆ ಜೊತೆಯಲಿ ಕಳೆಯುವ
ಜೊತೆಯಾಗಿ ಹಿತವಾಗಿ ಈ
ಬದುಕಿನುಸಿರಾ…
———————————
ಲಲಿತಾ ಕ್ಯಾಸನ್ನವರ.