ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಸತ್ಯ ಹೇಳುವ ಹೊತ್ತು

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸತ್ಯ ಹೇಳುವ ಹೊತ್ತು

ಈಗ ಕಾಲ ಬದಲಾಗಿದೆ
ನಾವ್ಯಾರು ಸತ್ಯ ಹೇಳುವ ಹಾಗಿಲ್ಲ
ಉಸಿರುಗಟ್ಟಿದ ದಿನಗಳು
ಟಿವಿ ಪತ್ರಿಕೆ ಮಾಧ್ಯಮದವರು
ಆಳರಸರ ಗುಲಾಮರು
ಮಾರಿ ಕೊಂಡಿದ್ದಾರೆ ಹಣ ಹೆಂಡಕೆ
ರಾಜನ ದರ್ಬಾರು ವಿದೇಶ ಪ್ರಯಾಣ
ಆಗಾಗ ಬಾನುಲಿಯಲ್ಲಿಸುಳ್ಳಿನ ಸರಮಾಲೆ
ನಾವೆಲ್ಲರೂ ಚಪ್ಪಾಳೆ ತಟ್ಟ ಬೇಕು
ಅವರು ಹೇಳಿದಂತೆ ಕುಣಿಯಬೇಕು
ಬಂದೂಕು ಮಾತನಾಡುತ್ತವೆ
ದಾಬೋಲ್ಕರ ಪನ್ಸಾರೆ ಕಲಬುರ್ಗಿ ಗೌರಿ
ಹೆಣವಾದರು ಸತ್ಯವ ಹೇಳಿ
ಸುಳ್ಳು ಹೇಳುವವರಿಗೆ ಪ್ರಶಸ್ತಿ ಸಮ್ಮಾನ
ಮೋಸ ವಂಚನೆ ಮಾಡುವವರಿಗೆ
ರಾಜ ಮರ್ಯಾದೆ
ಸಾಲ ಮಾಡಿ ದೇಶ ಬಿಟ್ಟು ಹೋಗಬಹುದು
ಅವರ ಸಾಲ ಮನ್ನಾ
ಪಾಪ ರೈತರ ಆತ್ಮ ಹತ್ಯೆ ಇನ್ನೂ ನಿಂತಿಲ್ಲ
ನಾವು ಧ್ವಜ ಏರಿಸುತ್ತೇವೆ
ಹುಸಿ ಭರವಸೆಗಳ ಉದ್ದೂದ್ದ ಮಾತು
ನಾವು ಚುನುಮುರಿ ತಿನ್ನುತ್ತೇವೆ
ಜೈ ಜವಾನ್ ಜೈ ಕಿಸಾನ್
ಜೈಹಿಂದ್ ಘೋಷಣೆ
ಕಳೆದುಕೊಂಡೆವು
ಬಾಪು ಕಟ್ಟಿದ ಭಾರತ
ಈಗ ಸಿಡಿದೇಳಬೇಕಿದೆ
ಕೂಗಬೇಕಿದೆ ಹಕ್ಕುಗಳಿಗೆ
ಬರುವ ನಾಳಿಗೆ ಬದುಕ ಬೇಕಿದೆ

ಸತ್ಯ ಹೇಳುವ ಹೊತ್ತು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಸತ್ಯ ಹೇಳುವ ಹೊತ್ತು

  1. ಬರುವ ನಾಳೆಗೆ ಬದುಕಬೇಕಿದೆ…
    ಸತ್ಯವನ್ನು ಸಾರಲು… ನಮ್ಮ ಹಕ್ಕುಗಳಿಗೆ
    ಬಡಿದಾಡಲು…. ಸಿಡಿದೇಳಲು…
    ಪ್ರಸ್ತುತ ವಾಸ್ತವ ಬಿಂಬಿಸುವ ಕವನ

  2. ನಿಮ್ಮ ಕವನದ ಒಂದೊಂದು ಮಾತು ಸತ್ಯ ಮೋಸ ವಂಚನೆಯ ರಾಜ್ಯದಲ್ಲಿ ಸತ್ಯ ಸಮಾಧಿ

Leave a Reply

Back To Top