ಕಾವ್ಯ ಸಂಗಾತಿ
ಡಾ. ಮಹೇಂದ್ರ ಕುರ್ಡಿ
ವೃತ್ತಿ _ನಿವೃತ್ತಿ
ಬದುಕಿಗೊಂದು ಭರವಸೆಯ ನೆಲೆ
ಕಾಯಕವೇ ನಿರಂತರ ಸೆಲೆ
ಬದುಕುವುದು ಒಂದು ಕಲೆ
ದುಡಿದಾಗಲೇ ನಿನಗೊಂದು ಬೆಲೆ.
ವಿದ್ಯೆ ಕಲಿತು ಮುಗಿಸಿ
ಅಲೆದೆ ಜೀವನಕ್ಕಾಸರೆ ಬಯಸಿ
ಬಂತು ಅದೃಷ್ಟ ನಿನ್ನ ಅರಸಿ
ನೌಕರಸ್ಥ ದೊರೆ ನೀನೇಂದೆನಿಸಿ.
ದುಡಿದು ದಣಿದವನೇ ಬಲ್ಲ
ಆ ಬೆವರ ಸಿರಿಯನ್ನೆಲ್ಲ.
ಅಳುಕದಿರೆ ಏರುಪೇರಿಗೆ ದಿನವೆಲ್ಲ.
ಆಗಲೇ ಜೀವನ ಸವಿ ಬೆಲ್ಲ.
ಅರವತ್ತಕ್ಕೆ ಆಯಸ್ಸು ಸುತ್ತಿ
ಬಂದಾಗ ತೊರೆಯಬೇಕು ವೃತ್ತಿ
ಉದ್ಯೋಗಸ್ಥರಿಗೆ ಕಟ್ಟಿಟ್ಟ ಬುತ್ತಿ
ಇದು ವಯೋ ಸಹಜ ನಿವೃತ್ತಿ.
ಜೀವಕೆ ಆಸರೆ ಎಂಬ ಬೆಳಕು
ಇಳಿ ವಯಸ್ಸಿನಲ್ಲಿ ಬೇಕು
ಹೀಗೋ ಹಾಗೋ ಬಾಳಬೇಕು
ಬಾಳು ಸುಖಾಂತ್ಯ ಕಂಡರೆ ಸಾಕು.
ಡಾ. ಮಹೇಂದ್ರ ಕುರ್ಡಿ
ಚೆನ್ನಾಗಿದೆ. ಅಭಿನಂದನೆಗಳು.