ಇಮಾಮ್ ಮದ್ಗಾರ ಅವರ ಕವಿತೆ-ಬದುಕು

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ ಅವರ ಕವಿತೆ-

ಬದುಕು

ಗೊತ್ತಿಲ್ಲದ ಪ್ರಶ್ನೆಗಳಿಗೆ
ಉತ್ತರ ಬರೆಯಬೇಕಂತೆ
ತುಟಿತೆರೆಯದೇ..
ಮಾತಾಡಿ ಮಾತಿನ
ಸೇತುವೆ ಕಟ್ಟಬೇಕಂತೆ !

ಮಗುವಾದಾಗಿನ ಸಂತಸ
ಮರೆಯಾದಾಗಿನ ಸಂಕಟ
ನೆನಪಿಕೊಳ್ಳ ಬಾರದಂತೆ
ನೀರಿಲ್ಲದೇಯೂ ನಿಲ್ಲದೇ
ಈಜಬೇಕಂತೆ !

ಎಕಾಎಕಿ ಕಂಡ ಹಳೆಯ ಪ್ರೇಮಿಯ..
ಕೂಗ ಲಾಗದಿದ್ದರೂ
ಸ್ವಗತದಲ್ಲೇ ಕೂಗಿ
ಕನಸಲ್ಲೇ ರಮಿಸಿ ನಿಟ್ಟುಸುರಿಲ್ಲದೇ ಬದುಕಬೇಕಂತೆ !

ರಾತ್ರಿ ಚಂದ್ರನೊಂದಿಗೆ
ಎದೆಯ ಹಾಡು ಹಂಚಿಕೊಂಡರೆ ಎನಾಯಿತು ?
ಹಗಲು ಸುಡುವ ಸೂರ್ಯ
ನೊಂದಿಗೆ ಕಷ್ಟ ಸುಖಗಳ
ಮಾತಾಡಬೇಕಂತೆ

ಕತ್ತಲೆಯ ಕೊಲ್ಲಲು
ದೀಪ ಹಚ್ಚಿದಾಗ..
ತಾಪ ತಾಕುವದು ಸಹಜವಂತೆ
ನೊಂದ ಮನಸು ಹಸನಾಗಿ
ನಗೆಯ ಕನಸು ನನಸಾಗ ಬೇಕೆಂದರೆ ಸಹನೆ ಬೇಕಂತೆ

ಎಕೇಂದರೇ ಇದೇ
ಬದುಕಂತೆ


ಇಮಾಮ್ ಮದ್ಗಾರ

Leave a Reply

Back To Top