ಅಶೋಕ ಬೇಳಂಜೆ-ನಂಬಿಕೆ

ಕಾವ್ಯ ಸಂಗಾತಿ

ಅಶೋಕ ಬೇಳಂಜೆ-

ನಂಬಿಕೆ

ಹಾದಿತಪ್ಪಿದ ಮರುಳು ಮನವ ತಡೆ
ಸಡಿಲಬಿಟ್ಟರದು ಎಳೆವುದು ಇಷ್ಟ ಬಂದೆಡೆ
ಬಹುಚಿಂತಿಸದೆ ಎದ್ದು ನಡೆ ಮುಂದಕ್ಕೆ
ಇರಲಿ ವರ್ತಮಾನ ಭವಿಷ್ಯದ ತಿಳುವಳಿಕೆ

ಈಗಿರೋದೇ ಬಾಳು ನಿನ್ನೆಯು ಮುಗಿದಿದೆ
ನಾಳೆಯ ಬಗ್ಗೆ ತಿಳಿಯದು ಅದಿನ್ನು ಬರಲಿದೆ
ಚಿಂತಿಸುತ ಚಿತೆಯ ಕಡೆ ಪಯಣಿಸದಿರು
ಎಡರು ತೊಡರುಗಳು ಸಹಜ ಗಮನಿಸದಿರು

ಬದುಕಿಗೆ ಭಾಷ್ಯವನು ಬರೆಯಲಾಗದಲ್ಲಾ
ಮೇಲಿರುವಾತ ಆಗಲೇ ಬರೆದಿಹನಲ್ಲಾ
ಸರಿ ತಪ್ಪುಗಳ ಅರಿವಿದ್ದರೆ ಒಳಿತಾಗುವುದು
ಅತಿ ಸುಖ ಸಿಕ್ಕರೆ ಅಹಮ್ ತಲೆಗೇರುವುದು

ನಂಬಿಕೆಗಳ ಬಲಪಡಿಸುತ್ತ ಸಾಗುತ್ತಿರು
ದೊರೆತಿರುವ ಜೀವನವ ಪ್ರೀತಿಸುತ್ತಿರು
ಜನುಮ ಇರುವುದೊಂದೇ ಮರೆಯದಿರು
ಬೇಕಾಬಿಟ್ಟಿ ಬಾಳಿ ಹಾಳುಗೆಡವದಿರು


ಅಶೋಕ ಬೇಳಂಜೆ

Leave a Reply

Back To Top