ಇಂದಿರಾ.ಕೆ-ನೀನೇಕೆ ದೂರಾದೆ

ಕಾವ್ಯ ಸಂಗಾತಿ

ಇಂದಿರಾ.ಕೆ-

ನೀನೇಕೆ ದೂರಾದೆ

ಒಲವದಂಗಳದಲಿ ಚೆಲುವ ಚಿತ್ತಾರವ ಬಿಡಿಸಿ
ಸುತ್ತಲೂ ಬಣ್ಣಗಳ ಚೆಲ್ಲಿ
ರಂಗಲ್ಲಿ ಮೀಯುತಿರಲು
ನೀನೇಕೆ ದೂರಾದೆ ಹೀಗೆ…?

ಮನದಂಗಳದಲಿ ಅನುರಾಗದ ನಿನಾದವ ನುಡಿಸಿ
ಮೈಮರೆತು ತಲ್ಲೀನವಾಗಿರಲು
ನೀನೇಕೆ ದೂರಾದೆ ಹೀಗೆ…?

ಬಾನಂಗಳದಲಿ ಕನಸಿನ ಕಾಮನಬಿಲ್ಲನು ಮೂಡಿಸಿ
ಜೀಕುವ ಆಸೆಯ ಚಿಗುರಿಸಿ
ನಲಿ – ನಲಿಯುತಿರಲು
ನೀನೇಕೆ ದೂರಾದೆ ಹೀಗೆ…?

ಹೃದಯಂಗಳದಲಿ ಲಗ್ಗೆ ಇಟ್ಟು
ಕುಳಿತಿರಲು ಮೆಲ್ಲನೆ
ಪ್ರತಿ ಮಿಡಿತವು ನಿನ್ನ ಪಿಸುಮಾತ ಆಲಿಸಿ ಗುನುಗುತಿರಲು
ನೀನೇಕೆ ದೂರಾದೆ ಹೀಗೆ…?

ಅಂತರಂಗದೀ ನೀ ಸೇರಿ
ಪ್ರೇಮ ಹೊನಲು ಹರಿಸಿ
ಒಲುಮೆ ಸಿಂಚನದೀ ಸೇರಬರಲು ನಿನ್ನ ಒಡಲ
ಮಾಯವಾದೆ ಮೌನದೀ…

ಮನಸು ಕನಲಿತು ನಿನ್ನ ಮೇಲೆ
ನೀ ಇತ್ತ ವೇದನೆಗೆ
ಕಣ್ಗಳು ನಿರುಕಿಸುತಿವೆ ನೀ ಇಟ್ಟ
ಹೆಜ್ಜೆಗಳ ಕಡೆಗೆ…

————————————

ಇಂದಿರಾ.ಕೆ

Leave a Reply

Back To Top