ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ-
ದಣಿವಾಯಿತು ದುಃಖಕ್ಕೆ
ನಾನು ಒಂಟಿ ಪಯಣಿಗ
ನಾನು ಮತ್ತು ನನ್ನ ನೆರಳು
ಒಮ್ಮೆ ಹಿಂದೆ ಒಮ್ಮೆ ಮುಂದೆ
ಬಿಸಲು ಬೆಳಕು ಗಾಳಿ ನೀರು
ನಗೆ ನೆಮ್ಮದಿ ನನ್ನ ಆಸ್ತಿ
ಕಸಿದುಕೊಳ್ಳಲು ಹಲವು ಯತ್ನ
ನೋವು ದುಃಖ ಬೆನ್ನು ಹತ್ತಿದವು
ಕಾಟ ಕೊಟ್ಟವು ತಿವಿದವು
ಚುಚ್ಚಿದವು ಘಾಸಿಗೊಳಿಸಿದವು
ನನ್ನ ಮುಗ್ಧ ಭಾವಗಳ
ಬಗ್ಗಲಿಲ್ಲ ಜಗ್ಗಲಿಲ್ಲ
ಬೇಸರದ ಉಸಿರು ಹೊರಹಾಕಲಿಲ್ಲ
ಮೌನದಿ ಮೆಲ್ಲನೆ ಹೆಜ್ಜೆ ಹಾಕಿದವು
ಅದೆಷ್ಟು ದೂರ ನಡೆದೆನು
ನಡೆಯಲಾಗದೆ ಬಳಲಿದವು
ನೋವು ನಂಜು ನನ್ನ ಕಂಡು
ದುಃಖ ದುಃಖಿಸಿತು
ನನಗೆ ದುಃಖ ನೀಡಲಿಲ್ಲವೆಂದು
ಸಂತಸ ಮುಕ್ತಿಯ ಗುರಿಯೆಡೆಗೆ
ನಗೆಯ ಪಯಣ
ದೂರವಾಯಿತು ದುಃಖ
ನನ್ನ ನಗೆಯ ಮಲ್ಲಿಗೆಯ ಕಂಡು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ದೂರವಾಯಿತು ದುಃಖ….
ನನ್ನ ನಗೆ ಮಲ್ಲಿಗೆಯ ಕಂಡು…
ಎಷ್ಟು ಉದಾತ್ತ ಮತ್ತು ಸುಂದರ ಅಭಿವ್ಯಕ್ತಿ…
ಸರ್
ಆಳವಾದ ಅನುಭವದ ಸಾಲುಗಳು
ಅರ್ಥಪೂರ್ಣ ಕವಿತೆ
Beautiful Sir
Excellent poem
ಸುಂದರ ಸರಳ ರೀತಿಯಲ್ಲಿ ಅರಳಿ ಬಂದ ಕವನ
ತಮ್ಮ ಕವನ ರಚನಾ ಶೈಲಿ ಅತ್ಯಂತ ಸುಂದರ ಸೂಕ್ಷ್ಮ ಮನಸ್ಸಿನ ಅಭಿವ್ಯಕ್ತಿ ಸರ್
ಹೃದಯ ತಟ್ಟುವ ಕವನ
ಹೃದಯ ಕಲಕುವ ಕವನ
ಅತ್ಯುತ್ತಮ ಸುಂದರ ಕವನ ಸರ್
ಮನ ಮುಟ್ಟುವಂತ ಕವಿತೆಯ ಸಾಲುಗಳು
ಬಾಳ ಪಯಣದ ಕಹಿ ಸತ್ಯಕ್ಕೆ ಹಿಡಿದ ಕನ್ನಡಿ