ಡಾ ಅನ್ನಪೂರ್ಣ ಹಿರೇಮಠ-ನನ್ನುಸಿರೇ

ಕಾವ್ಯಸಂಗಾತಿ

ಡಾ ಅನ್ನಪೂರ್ಣ ಹಿರೇಮಠ-

ನನ್ನುಸಿರೇ

ಉಸಿರಿನೊಳಗಿನ ಕಸಿವಿಸಿ ಹೇಳಬಹುದೇ ವಿವರಿಸಿ
ಕಾತರಿಸಿ ಕಾತರಿಸಿ ಕಂಗೆಡಿಸಿ ಕೊರೆಯುತಿದೆ ಹೃದಯಾ
ಹಿಂಡುತಿದೆ ಎದೆಯಾ ಕೊಲ್ಲುತಿದೆ ನನ್ನ ನಗೆಯಾ//

ಒತ್ತರಿಸಿ ಬರುವ ನೆನಪಿನಲೆಗಳ ಬಿಡದ ಕಾಟ
ಸುತ್ತಿ ಸುತ್ತಿ ಸುಳಿವ ಚಿತ್ರಗಳ ಹುಡುಕಾಟ
ಮರೆಯಲಾರದ ನೂರು ಹಸಿ ಹಸಿ ಭರವಸೆಗಳು
ಬಳಿ ಬಂದು ಬಳಸಿ ನಿಂದು ವೇದನೆಯ ತಂದು
ಬಿಡದೆ ಕಾಡುತಿವೆ ಪ್ರತಿಕ್ಷಣವೂ ಪ್ರತಿದಿನವೂ //

ಅದೇನೊ ನನ್ನೊಡಲಲಿ ಪ್ರೀತಿತುಂಬಿ ಈ ನನ್ನ ಜೀವ
ಬಯಕೆಗಳ ಹಸಿರು ಬಳ್ಳಿ ಹಂದರ ತೂಗಿದಂತೆ ಚಂದಿರ
ಕಾಣೋ ಕನಸುಗಳೇ ಸುಂದರ ಮನೆ ಮಾಡಿವೆ ಬಂಧುರ
ಒಳಗೊಳಗೆ ನಾದಾಂತರಂಗ ನುಡಿ ನುಡಿಸಿ ಅಂಗ ಸಂಗ
ಝೇಂಕರಿಸಿ ಪ್ರೇಮತರಂಗ ಬೆಸೆದು ಅರಿಯದ ಬಂಧ /

ಬೀಳುತೇಳುವ ಕಡಲ ತೆರೆಗಳ ಮೇಲೆ
ಹಾಯ್ ದೋಣಿಯಲಿ ಒಂಟಿ ಪಯಣ
ಸುಳಿ ಸುಳಿದು ಬೀಸೋ ಗಾಳಿಗೆ ಒದ್ದೆಯಾದ ನಯನ
ಸಾಗುತಿದೆ ಗೊತ್ತಿಲ್ಲ ದಿಕ್ಕು ಕಾಣದೆ ಯಾವುದೋ ಕಾರಣ
ನೆಮ್ಮದಿಯ ಹುಡುಕಾಟ ಪ್ರತಿಕ್ಷಣ//

ಇಂದೇಕೋ ಬರೀ ಭಯ ಆತಂಕದ ಅನಾವರಣ
ಭೋರ್ಗರೆದು ಉಕ್ಕುತಿಹ ಒಲವ ಜಲಪಾತ
ಅರಿವಿಲ್ಲದೆ ಧುಮ್ಮಿಕ್ಕಿ ತಲುಪುತಿದೆ ಪ್ರಪಾತ
ಸೇರೊ ಬಯಕೆಯಲಿ ಪ್ರೇಮದಾಲಾಪ
ಏನಾದರೂ ಮರೆಯದ ಪ್ರೀತಿ ಹೃದಯದಿ ಅಮರ//


ಡಾ ಅನ್ನಪೂರ್ಣ ಹಿರೇಮಠ

One thought on “ಡಾ ಅನ್ನಪೂರ್ಣ ಹಿರೇಮಠ-ನನ್ನುಸಿರೇ

Leave a Reply

Back To Top