ನಾಗರಾಜ ಬಿ.ನಾಯ್ಕ-ದಾರಿಯೆಂದರೆ

ಕಾವ್ಯಸಂಗಾತಿ

ನಾಗರಾಜ ಬಿ.ನಾಯ್ಕ-

ದಾರಿಯೆಂದರೆ

ದಾರಿಯೆಂದರೆ ಹಾಗೆ
ಒಮ್ಮೆ ಖಾಲಿ ಇನ್ನೊಮ್ಮೆ ಸಾವಿರದಾರಿ
ನಮ್ಮದೆನ್ನುವ ಪಯಣ ಮಾತ್ರ
ನಾವು ಸಾಗಿದಂತೆ
ಮಳೆ ಬಿಸಿಲು ಚಳಿ ಎಲ್ಲವೂ
ದಾಟಿ ಪಯಣ ಹೊರಟಿರೆ
ಎಲ್ಲವೂ ಅನುಭವಿಸಿದರೆ ಜೀವ ಗಟ್ಟಿ
ಮತ್ತೇನೋ ಹೊಸದು ಮಾತಿನಲ್ಲಿ
ಕೃತಿ ಪ್ರಕೃತಿ ನಗುವಲ್ಲಿ
ಹುಡುಕಬೇಕು ಹೊಸದೊಂದನ್ನು
ಅರ್ಥವಾಗಿಸಬೇಕು ಮಾತನ್ನು ಕೆಲಸವನ್ನು
ಕಾಡಬೇಕು ಬೇಡಬೇಕು ಬದುಕನ್ನು
ಒಮ್ಮೆ ಪ್ರತಿಮೆಯಾದರೆ ಮತ್ತೆ ನಿಲ್ಲಬೇಕು
ದನಿಯ ಆಲಿಸಬೇಕು ಮಾತು ಕೇಳಬೇಕು
ಮೋಡವಾಗಬೇಕು ಮಳೆ ಹನಿಯಂತೆ
ಗೆದ್ದರೂ ಸೋತರೂ ದಾರಿ ಸವೆಯಬೇಕು
ಬದುಕಿನ ಪಲ್ಲವಿಗೆ ಸಾಲಾಗಿ ನಿಲ್ಲಬೇಕು
ಏನಾದರೂ ಆಗಬೇಕು ಮೊದಲು
ನಡೆವ ಹೆಜ್ಜೆಗೆ ದಾರಿ ಹುಡುಕಬೇಕು
ಆದಷ್ಟು ಒಳ್ಳೆಯದಿದ್ದರೆ ಒಳಿತು
ದಾರಿ ಉಳಿದರೆ ನಾವು ಉಳಿದಂತೆ
ದಾರಿ ಅಳಿದರೆ ನಾವು ಅಳಿದಂತೆ
ಬದುಕಿಗೆ ದಾರಿಯೆಂದರೆ ಅವಕಾಶ
ಸಾಗಲೇಬೇಕು ನಾವು ಸಾವಕಾಶ

———————————–

ನಾಗರಾಜ ಬಿ.ನಾಯ್ಕ

2 thoughts on “ನಾಗರಾಜ ಬಿ.ನಾಯ್ಕ-ದಾರಿಯೆಂದರೆ

  1. ಬದುಕು ಬದುಕಿನ ದಾರಿ ಎರಡೂ ಅರ್ಥ ಪೂರ್ಣ ವಾಗಿ ಮೂಡಿಬಂದಿದೆ.

Leave a Reply

Back To Top