ಎ. ಹೇಮಗಂಗಾ ಅವರ ಹಾಯ್ಕುಗಳು

ಕಾವ್ಯ ಸಂಗಾತಿ

ಎ. ಹೇಮಗಂಗಾ

ಹಾಯ್ಕುಗಳು

ಮನಹೊಲದಿ
ಬೆಳೆ ; ಅಕ್ಷರ ಬೀಜ
ಬಿತ್ತಿದ ಗುರು

ತಾಯಿಯೂ ನಿಜ
ಗುರುವೇ ಮಗುವಿನ
ಭವಿತವ್ಯಕೆ

ಜನ್ಮದಾತರು
ಗುರು ಬಾಳದಾರಿಗೆ
ದೀಪಗಳಂತೆ

ಎದೆಗೂಡಲಿ
ಭಕ್ತಿ , ಭಾವದ ಪೂಜೆ
ಗುರುವೇ ದೈವ

ಬಂಜರು ಮನ
ಬೆಳೆ ಬೆಳೆವವನು
ಗುರುವು ಮಾತ್ರ

ಶಿಕ್ಷಕ ನಿಜ
ರಕ್ಷಕ ; ಭವಿಷ್ಯ
ಸುಭದ್ರ ಎಂದೂ

ಗುರುವೆಂದರೆ
ಶಿಲೆ ಮೂರ್ತಿಯಾಗಿಸಿ
ತೋರುವ ಶಿಲ್ಪಿ

ತಾಳ್ಮೆ, ಸಂಯಮ
ಹುಟ್ಟುಗುಣ; ಗುರುವು
ಕಾರುಣ್ಯ ಮೂರ್ತಿ

ನಮನಗಳು
ಸಾಸಿರ ಮಾರ್ಗದರ್ಶಿ
ಗುರುಗಳಿಗೆ

ಗುಲಾಮನಾಗು
ಗುರುಗಳಿಗೆ ; ಮುಕ್ತಿ
ದೊರಕುವುದು


ಎ. ಹೇಮಗಂಗಾ

Leave a Reply

Back To Top