ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಶಿಕ್ಷಕ
ವಿದ್ಯಾ ಬುದ್ಧಿ ಸಿದ್ಧಿಯ ಕರ್ತ
ಅಡಗಿಸಿಕೊಂಡು ಎಲ್ಲ ಅಮೂರ್ತ
ಅವನ ಕೈಯಲ್ಲಿ ವಿಧ್ಯಾರ್ಥಿಗಳ ಸೂತ್ರ
ಮಿಗಿಲಾದ ದೇವರು ನೀನು ಮಾತ್ರ //
ನಿನ್ನ ಕೀರ್ತಿ ಗಿರಿ ಶಿಖರದೆತ್ತರ
ನಿನ್ನ ಹಿರಿಮೆ ಗರಿಮೆ ಅಪಾರ
ವಿದ್ಯಾರ್ಥಿಗಳಿಗೆ ನೀ ಸರದಾರ
ಪಾಠ ಪ್ರವಚನಗಳ ಹರಿಕಾರ //
ಉಳಿ ಹಿಡಿಯದ ಸಮಾಜ ಶಿಲ್ಪಿ ನೀನು
ಮನದ ಹೊಲವ ಹುಟ್ಟಿ ಬಿತ್ತುವ ರೈತ
ಬಣ್ಣ ಕುಂಚವಿಲ್ಲದ ಚತುರ ಚಿತ್ರಗಾರ
ಶಾಲೆ ಎಂಬ ನಂದನದ ಕಾವಲುಗಾರ //
ಕಲಿತು ಕಲಿತು ಕಲಿಸುವ ವಿದ್ಯಾರ್ಥಿ
ಸತತಾಭ್ಯಾಸಿ ಶಿಕ್ಷಣ ಸಾರೋಟಿನ ಸಾರಥಿ
ಕಣ್ಣಿಗೆ ಕಾಣುವ ದೇವರ ಮೂರ್ತಿ
ಇವನಿಗೆ ನಾಗರಿಕ ನಿರ್ಮಾಣದ ಕೀರ್ತಿ //
ಶಾಲೆಯೆಂಬ ಕಾರ್ಖಾನೆಯ ಕುಶಲ ಕಾರ್ಮಿಕ
ದೇಶದುನ್ನತಿಗೆ ಸರಕುಗಳ ಒದಗಿಸುವ ಉದ್ಯಮಿ
ಮಗುವಿನ ಕನಸುಗಳ ಸಾಕ್ಷಾತ್ಕರಿಸೋ ಸಾಧಕ
ಹೃದಯದಲಡಗಿದ ದಿವ್ಯ ಶಕ್ತಿ ಅವಿರ್ಭಾವಿಸುವ ಜಾಣ //
ನಿಸ್ವಾರ್ಥ ಕಾರ್ಯವ ಗೈವ ಕಾಯಕಯೋಗಿ
ಸಾಧನೆಯ ಭಿಕ್ಷೆ ಬೇಡುವ ಜೋಳಿಗೆಯ ಜೋಗಿ
ತನ್ನಲ್ಲಿರುವುದೆಲ್ಲಾ ಧಾರೆ ಎರೆವ ತ್ಯಾಗಿ
ಬೋಧನೆಯ ಹಸಿವಿಂಗಿಸೊ ಅಕ್ಷರಗಳ ಹುಗ್ಗಿ//
ಡಾ ಅನ್ನಪೂರ್ಣ ಹಿರೇಮಠ
ಸಮಯೋಚಿತ ಗೌರವಪೂರ್ವಕ ಕವಿತೆ
ತಮ್ಮನ್ನು ಬಾಲ್ಯದಲ್ಲಿ ಅನ್ನಪೂರ್ಣ ಅಂತ ಕರೆದರು ಆದರೆ ಯಾರಿಗೆ ಗೊತ್ತಿತ್ತು ತಾವು ಕಾವ್ಯದಲ್ಲಿ ಪರಿಪೂರ್ಣ ಅಂತ ತಮ್ಮ ಕಾವ್ಯಾಂಜಲಿ ಸಹೃದಯರಿಗೆ ರಸದೌತಣ ನಾವು ಧನ್ನ್ಯೋ ಧನ್ನ್ಯೋಸ್ಮಿ.
ಒಳ್ಳೆಯ ಕವಿತೆ