ನರಸಿಂಗರಾವ ಹೇಮನೂರ ಮರೆಯಲೆಂತು ಗುರುವನು

ಕಾವ್ಯ ಸಂಗಾತಿ

ನರಸಿಂಗರಾವ ಹೇಮನೂರ

ಮರೆಯಲೆಂತು ಗುರುವನು

ಶಿಸ್ತಿಗಾಗಿ ಶಿಕ್ಷೆ ಕೊಟ್ಟು
ಶಿಕ್ಷಣಕ್ಕೆ ಒತ್ತು ಕೊಟ್ಟು
ಬದುಕು ಬರಹ ತಿದ್ದಿ ತೀಡಿ
ನನ್ನನೊಂದು ರೂಪು ಮಾಡಿ
ಬಾಳಿಗೊಂದು ಅರ್ಥ ಕೊಟ್ಟು
ಪೊರೆದ ಪ್ರೀತಿ ಗುರುವನು
ಮರೆಯಲೆಂತು ಅವರನು!

ಬವಣೆಯಲ್ಲಿ ಬದುಕ ನೂಕಿ
ನೋವಿನಲ್ಲು ನಗುತ ನಿತ್ಯ
ಶಾಲೆಯಲ್ಲಿ ನಮ್ಮ ನಡುವೆ
ಮರೆತು ಎಲ್ಲ ಮನೆಯ ವಾರ್ತೆ
ನಮಗೆ ಕಟೆದು ಕಲಿಸಿದಂಥ
ಪರಮ ಪೂಜ್ಯ ಗುರುವನು
ಮರೆಯಲೆಂತು ಅವರನು!

ನೀತಿಪಾಠ ಹೇಳಿ ಕೊಡುತ
ತಿಳಿಯದ್ದನ್ನು ತಿಳಿಸಿ ಕೊಡುತ
ತಮ್ಮ ಜ್ಞಾನಧಾರೆ ಎರೆದು
ನಮಗೆ ಮುಂದೆ ಸಾಗಿಸುತ್ತ
ತಾವು ಮಾತ್ರ ಅಲ್ಲೆ ಉಳಿದು
ನಾವು ಬೆಳೆದ ಬಗೆಯ ತಿಳಿದು
ಸಂಭ್ರಮಿಸುವ ಗುರುವನು
ಮರೆಯಲೆಂತು ಅವರನು!

ನಾನು ಏರಿದೆತ್ತರಕ್ಕೆ
ಅವರೆ ಇಂದು ಕಾರಣ
ಅವರ ಒಲುಮೆ ಹರಕೆ ನನ್ನ
ಕಾಯುತಿಹುದು ಕ್ಷಣ ಕ್ಷಣ
ಮರೆಯದಂತೆ ಕಾಡುತಿಹುದು
ತೀರದಂಥ ಆ ಋಣ
ಮರೆಯಲಾರೆ ಗುರುವನು
ಚರಣಕವರ ನಮಿಪೆನು.


ನರಸಿಂಗರಾವ ಹೇಮನೂರ

6 thoughts on “ನರಸಿಂಗರಾವ ಹೇಮನೂರ ಮರೆಯಲೆಂತು ಗುರುವನು

  1. ಸರ್ ಕವಿತೆ ಅದ್ಭುತ ವಾಗಿ ಮೂಡಿಬಂದಿದೆ.
    ತೀರದ ಖಣ ನಿಜವಾದ ಚಿಂತನ
    ಇಂತಹ ಮನೋಜ್ಞ ಕವಿತೆ ನೀಡಿದ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಜೀ…⚘

    1. ಗುರುವಿನ ಕುರಿತು ತಾವು ಬರೆದ ಕವನ ಅದ್ಭುತವಾಗಿದೆ.ಮನದಾಳದಿಂದ ಹರಿದು ಬಂದ ನುಡಿಗಳು ಗುರುವನ್ನು ಸಾರ್ಥಕ ಆಗಿಸುತ್ತದೆ ತುಂಬು ಹೃದಯದ ಅಭಿನಂದನೆಗಳು.

    2. ಹೆತ್ತವರ ಮತ್ತು ಶಿಕ್ಷಕರ ಋಣ ತೀರಿಸಲಾಗದ ಬಂಧ ಅಭಿನಂದನೆಗಳು ಸರ್ಡ್ತಠ್ಯ

  2. ಗುರುಕೃಪೆ ‌‌ನಿಜಕ್ಕೂ ಅವಿಸ್ಮರಣೀಯ. ಗುರು (ಶಿಕ್ಷಕ) ವರ್ಗಕ್ಕೆ ಶರಣಾರ್ಥಿ

  3. ಗುರು ಸ್ಮರಣೆ ಮನಮುಟ್ಟುವಂತಿದೆ.ಅಭಿನಂದನೆಗಳು ಸರ್.

Leave a Reply

Back To Top