ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಚನಶ್ರೀ ಶಿವಕುಮಾರ ಪಾಟೀಲ

ಬಸವ ಕರುಣಿಸಿದ

ಜ್ಞಾನದಲ್ಲಿ ಎಲ್ಲರನ್ನ
ದಿಗ್ಭ್ರಮೆ
ಗೊಳಿಸಿದ
ಜ್ಞಾನದ ಶಿಖರನು

ಗುಣದಲ್ಲಿ ಗುಣಕೆ
ಒಡೆಯನು
ಚಲುವಿನಲ್ಲಿ
ಚಂದಿರನನ್ನೆ ನಾಚಿಸುವವನು

ನಡೆನುಡಿ ಒಂದಾಗಿಸಿಕೊಂಡ
ನೀತಿ ಧರ್ಮದಲ್ಲಿ
ನಡೆಯುವ
ಧರ್ಮ ರಾಯನು

ನನಗೆಂದೆ ಆ ಬಸವ ಕರುಣಿಸಿದ
ಬತ್ತದ ಒಲವಿನ ಕಡಲವನು
ಕನಸಲ್ಲೂ ಅರೆಗಳೆಗೆ ನನ್ನ
ತೊರೆಯದವನು


ವಚನಶ್ರೀ ಶಿವಕುಮಾರ ಪಾಟೀಲ

About The Author

Leave a Reply

You cannot copy content of this page

Scroll to Top