ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
‘ಬರಲೇ ಇಲ್ಲ…ನನ್ನೊಡೆಯ…’
(ಒಂದು ದೋಣಿಯ ಸ್ವಗತ)
ಕಾಯುತಿಹೆನು ದಾರಿ
ತೀರದಲಿ ಚಲಿಸದೆ ನಿಂದು
ನನ್ನೊಡೆಯ ಬರುವನೆಂದು…
ಬರಲಿಲ್ಲ…ಏಕೋ..
ಹೊತ್ತು ಮುಳುಗಿದರೂ ,
ಮೈ ನಡುಗಿದೆ ಭಯದಿಂದ….
ನಸುಕು ಮೂಡುವ ಮುನ್ನ
ನನ್ನ ಮೈದಡವಿ ಅಣಿಮಾಡಿ
ಕಡಲ ಅಲೆಗಳ ಮೇಲೆ
ಕರೆದೊಯ್ಯುತಿದ್ದ ನನ್ನೊಡೆಯ
ಇಂದು ಬರಲಿಲ್ಲ…ಏಕೋ..
ಮನದೊಳೇನೋ ಮೂಡಿದೆ ಅಳುಕು….
ಪಡುವಣದಿ ಕೆಂಬಣ್ಣ
ಓಕುಳಿಯಾಟ ಆಡಿ ಭಾಸ್ಕರ
ನನ್ನೊಡೆಯನ ಬರುವಿಗೆ
ನಿರುಕಿಸಿ ಪಯಣಿಸುತಿಹ
ಮಂದ ಕಿರಣಗಳ ಸೂಸಿ
ಮೆಲ್ಲನೆ ಬೆಟ್ಟದಂಚಿಗೆ..
ಆದರೆ..ನನ್ನೊಡೆಯ ಬರಲೇ ಇಲ್ಲ…!
ಹಮೀದಾ ಬೇಗಂ ದೇಸಾಯಿ
ಚೆಂದದ ಕವಿತೆ
ಧನ್ಯವಾದಗಳು ಮೆಚ್ಚುಗೆಗೆ ತಮಗೆ.
ಹಮೀದಾ ಬೇಗಂ. ಸಂಕೇಶ್ವರ.
ದೋಣಿಯ ಸ್ವಗತದಲ್ಲಿ ಜೀವನದ ಯಾತನೆಯನ್ನು ಅತಿ ಸೂಕ್ಷ್ಮವಾಗಿ, ಗಂಭೀರವಾಗಿ ಅರುಹಿದ ರೀತಿ ಸೊಗಸಾಗಿ ಮೂಡಿಬಂದಿದೆ.