ಕಾವ್ಯ ಸಂಗಾತಿ
ಸುಮತಿ ಕೃಷ್ಣಮೂರ್ತಿ
ಗಜಲ್
ನದಿಗೆ ತಾನು ಸಂಭ್ರಮದಿ ಮುನ್ನಡೆಯುವ ಬಯಕೆ
ಸಾಗರಕೆ ತೋಳು ಚಾಚಿ ಬಿಗಿದಪ್ಪುವ ಬಯಕೆ
ಕುಸುಮ ದಳಕೆ ಮೆಲ್ಲನರಳಿ ದುಂಬಿಗಳಾ ಸೆಳೆದು
ಚೆಲುವನೆಲ್ಲ ಎರಕ ಹೊಯ್ದು ಸೂರೆಗೊಳುವ ಬಯಕೆ
ಸುಳಿವಗಾಳಿ ತಂತ್ರ ಹೂಡಿ ಎಲೆಯೊಂದನು ಕರೆದು
ವಿರಹಿ ಎದೆಗೆ ತಂಪುಸುದ್ದಿ ತಲುಪಿಸುವ ಬಯಕೆ
ಕೊಳದಲಿದ್ದ ನೈದಿಲೆಯ ಸಪ್ಪೆ ಮೊಗವ ನೋಡಿ
ಹುಣ್ಣಿಮೆಯ ಚಂದ್ರನಿಗೆ ತಬ್ಬಿ ಮುದ್ದಿಸುವ ಬಯಕೆ
ಪ್ರಕೃತಿಗೆ ಪ್ರೇಮಿಗಳ ಒಂದು ಮಾಡೋ ಆಸೆ
ಸುಮತಿ ಮನಕೆ ಎಲ್ಲವನ್ನೂ ಪ್ರೀತಿಸುವ ಬಯಕೆ
ಸುಮತಿ ಕೃಷ್ಣಮೂರ್ತಿ
Excellent lines. Everyone of us has an ambition in life. Even nature too has its own ambition. You have excellently coined words to analyse how nature wants to fulfill its ambition in its own way. Beautiful poem. Congrats
Nice lines of Gazal..
Awesome… Congratulations
ನಟರಾಜ್ ಅರಳಸುರಳಿ,
ತುಂಬಾ ಸರಳ ಸಂಗತಿಗಳನ್ನು ಕಾವ್ಯಾತ್ಮಕವಾಗಿ ಪೋಣಿಸಿದ್ದಾರೆ ಕವಿ.
ಇಷ್ಟವಾಯಿತು
Excellent lines. Congrats