ರೇಖಾಪ್ರಕಾಶ್ ಕವಿತೆ ನನ್ನಾಸೆ

ಕಾವ್ಯಸಂಗಾತಿ

ರೇಖಾಪ್ರಕಾಶ್

ನನ್ನಾಸೆ

ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರುವಾಸೆ ಬಾಳ ಬಾನಿನಲ್ಲಿ,
ನಕ್ಕು ಸುಮ್ಮನಾಗದೆ ಸಲಹೆ ಕೊಡುವಿರಾ ನನ್ನವರೇ

ಚುಕ್ಕಿಯಂತೆ ಮಿನುಗುವಾಸೆ ನೀಲಗಗನದಿ,
ಹೊಳಪುಕೊಡುವಿರಾ ಓ ತಾರೆಗಳೇ

ನವಿಲಿನoತೆ ರೆಕ್ಕೆ ಬಿಚ್ಚಿ ಕುಣಿಯುವಾಸೆ,
ಓ ಮೇಘಗಳೇ ಮೋಡವಾಗಿ ಮಳೆ ಸುರಿಸುವಿರಾ ನನಗಾಗಿ

ಕನಸುಗಳ ಹೊತ್ತು ಕತ್ತಲೆಯಲಿ ಒಂಟಿಯಾಗಿ ನಡೆಯುತ್ತಿರುವೆ,
ಕೈ ಹಿಡಿದು ಜೊತೆಯಾಗಿ ನಡೆಸುವೆಯಾ ನನ್ನವನೆ.

——————————————–

ರೇಖಾಪ್ರಕಾಶ್

Leave a Reply

Back To Top